Advertisement

ದೇಶದಲ್ಲಿ ಬಡವರ ಸಂಖ್ಯೆ 41.5 ಕೋಟಿ ಇಳಿಕೆ: ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖ

11:27 AM Oct 18, 2022 | Team Udayavani |

ನವದೆಹಲಿ: ಭಾರತದಲ್ಲಿ 2005-06ರಿಂದ 2019-21ರ ಅವಧಿಯಲ್ಲಿ ಬಡವರ ಸಂಖ್ಯೆಯಲ್ಲಿ 41.5 ಕೋಟಿ ಇಳಿಕೆಯಾಗಿದೆ. ಭಾರತವು ಈ ವಿಚಾರದಲ್ಲಿ ಐತಿಹಾಸಿಕ ಬದಲಾವಣೆ ತಂದಿದ್ದು, 2030ರ ವೇಳೆಗೆ ಮಹಿಳೆಯರು, ಪುರುಷರು ಹಾಗೂ ಮಕ್ಕಳಲ್ಲಿ ಬಡವರ ಸಂಖ್ಯೆಯನ್ನು ಅರ್ಧಕ್ಕಿಂತ ಕಡಿಮೆ ಮಾಡಬೇಕು ಎನ್ನುವ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ದೇಶ ಯಶಸ್ವಿಯಾಗಿ ಮುಟ್ಟಲಿದೆ ಎಂದು ವಿಶ್ವ ಸಂಸ್ಥೆ ವರದಿ ಹೇಳಿದೆ.

Advertisement

ಪೌಷ್ಠಿಕಾಂಶ, ಅಡುಗೆ ಅನಿಲ, ಸ್ವತ್ಛತೆ ಮತ್ತು ವಸತಿ ಎನ್ನುವ ನಾಲ್ಕು ಸೂಚಕಗಳನ್ನು ಆಧರಿಸಿ ಈ ಬಹು ಆಯಾಮದ ಬಡತನ ಸೂಚ್ಯಂಕವನ್ನು ತಯಾರಿಸಲಾಗಿದೆ. ಈ ಸೂಚ್ಯಂಕದ ಪ್ರಕಾರ ಸದ್ಯ ಭಾರತದಲ್ಲಿ 22.89 ಕೋಟಿ ಜನರು ಬಡತನದಲ್ಲಿದ್ದು, ವಿಶ್ವದಲ್ಲಿ ಅತಿ ಹೆಚ್ಚು ಬಡವರಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲಿದೆ. ಪಟ್ಟಿಯ 2ನೇ ಸ್ಥಾನದಲ್ಲಿ 9.67 ಕೋಟಿ ಬಡವರೊಂದಿಗೆ ನೈಜೀರಿಯಾ ಇದೆ. ಭಾರತದಲ್ಲಿ 9.7 ಕೋಟಿ ಮಕ್ಕಳು ಬಡತನದಲ್ಲಿದ್ದಾರೆ. ವಿಶ್ವದ 111 ರಾಷ್ಟ್ರಗಳಲ್ಲಿ ಒಟ್ಟು 1.2 ಬಿಲಿಯನ್‌ ಜನರು ಅಂದರೆ ಶೇ.19.1ರಷ್ಟು ಜನರು ಬಡವರಾಗಿದ್ದಾರೆ. ಅದರಲ್ಲಿ ಅರ್ಧದಷ್ಟು ಅಂದರೆ 59.3 ಕೋಟಿ ಮಕ್ಕಳಿದ್ದಾರೆ.

2005-05ರಿಂದ 2015-16ರ ಅವಧಿಯಲ್ಲಿ 27.5 ಕೋಟಿ ಜನರು ಬಡತನದಿಂದ ಹೊರಬಂದಿದ್ದರೆ, 2015-16ರಿಂದ 2019-21ರ ಅವಧಿಯಲ್ಲಿ 14 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ.

ಭಾರತದಲ್ಲಿ ಬಡತನ ಪ್ರಮಾಣ:

ಶೇ.21.2- ಗ್ರಾಮೀಣ ಭಾಗದಲ್ಲಿ

Advertisement

ಶೇ.5.5- ನಗರ ಪ್ರದೇಶದಲ್ಲಿ

20.5 ಕೋಟಿ- ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರು

Advertisement

Udayavani is now on Telegram. Click here to join our channel and stay updated with the latest news.

Next