Advertisement
ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸುಳ್ಯ ನ.ಪಂ. ಸಾಮಾನ್ಯ ಸಭೆಯಲ್ಲಿ ಎಸ್ ಡಿಪಿಐ ಸದಸ್ಯ ಕೆ.ಎಸ್. ಉಮ್ಮರ್ ವಿಷಯ ಪ್ರಸ್ತಾವಿಸಿ, ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀರಿ ಎಂದು ಅಧ್ಯಕ್ಷೆ, ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಾವು ಡಿ. 11ಕ್ಕೆ ನೀಡಿದ ಅರ್ಜಿಗೆ ನ.ಪಂ.ಉತ್ತರಿಸಿಲ್ಲ. ಈ ವಿಚಾರ ಅಜೆಂಡಾಕ್ಕೆ ಸೇರಿಸಿಲ್ಲವೇಕೆ ಎಂದು ಮುಖ್ಯಾಧಿಕಾರಿ ಗೋಪಾಲ್ ಅವರನ್ನು ಪ್ರಶ್ನಿಸಿದರು.
Related Articles
ರಮಾನಂದ ಹೆಗ್ಡೆ, ನಮಗೆ ಸಾರ್ವಜನಿಕರು ಶಾಪ ಹಾಕುತ್ತಾರೆ. ಮುಖ್ಯಾಧಿಕಾರಿಗಳು ಸರಿಯಾಗಿ ಉತ್ತರಿಸದಿದ್ದರೆ ಸ್ಥಾನದಲ್ಲಿ ಕುಳಿತುಕೊಳ್ಳಲು ಸೂಕ್ತರಲ್ಲ. ಶವ ಸಂಸ್ಕಾರದ ಹಣ ನೀಡಲೂ ಹಿಂದೆಮುಂದೆ ನೋಡಲಾಗುತ್ತಿದೆ ಎಂದರು. ಬಡವರು ಮನೆ ಕಟ್ಟಿದ್ದರೂ ಎನ್‌ಒಸಿ ನೀಡಲು ಅಧಿಕಾರಿಗಳು 15 ವರ್ಷಗಳಿಂದ ಅಲೆದಾಟ ನಡೆಸುತ್ತಿದ್ದಾರೆ. 6.10 ಎಕ್ರೆ ಜಾಗಕ್ಕೆ ಸಭೆ ನಡೆಸದೆ ತಮ್ಮಷ್ಟಕ್ಕೆ ಎನ್‌ಒಸಿ ನೀಡಲು ಪ್ರಯತ್ನ ನಡೆಯುತ್ತಿದೆ. ಎಲ್ಲ ಸದಸ್ಯರು ಗಂಭೀರವಾಗಿ ಪರಿಗಣಿಸದಿದ್ದರೆ ಒಂದೂವರೆ ವರ್ಷದೊಳಗಾಗಿ ಪಂಚಾಯತ್‌ನ್ನೇ ಮಾರಾಟ ಮಾಡುತ್ತಾರೆ ಎಂದು ಉಮ್ಮರ್ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷೆ ಈ ಬಗ್ಗೆ ಉತ್ತರಿಸುವಂತೆ ಆಡಳಿತ ಪಕ್ಷದ ಗಿರೀಶ್ ಕಲ್ಲಗದ್ದೆ ಸಲಹೆ ನೀಡಿದರು. ಸದಸ್ಯೆ ಪ್ರೇಮಾ ಟೀಚರ್ ಮಾತನಾಡಿದಾಗ ಆಕ್ಷೇಪಿಸಿದ ಗಿರೀಶ್ ಕಲ್ಲಗದ್ದೆ, ಉಮ್ಮರ್, ಹೆಗ್ಡೆ, ಅಜೆಂಡಾ ವಿಚಾರ ಬರಲಿ ಎಂದು ಪಟ್ಟು ಹಿಡಿದರು.
Advertisement
ಅಧ್ಯಕ್ಷರತ್ತ ಆಕ್ರೋಶವಿಪಕ್ಷ ಸದಸ್ಯ ಶಿವಕುಮಾರ್, ಅಜೆಂಡಾ ಸೇರ್ಪಡೆ ಅಧ್ಯಕ್ಷರ ಗಮನಕ್ಕೆ ಬರುತ್ತಿಲ್ಲ ಏಕೆ? ಕೈಗೊಂಡ ನಿರ್ಣಯವನ್ನೂ ಸರಿಯಾಗಿ ಬರೆಯುತ್ತಿಲ್ಲ ಎಂದರು. ಅಧ್ಯಕ್ಷೆಯ ಉತ್ತರವೂ ಸರಿಯಲ್ಲ ಎಂದು ಗೋಕುಲ್‌ದಾಸ್ ಹೇಳಿದರು. ಎನ್.ಎ. ರಾಮಚಂದ್ರ ಅವರು ಇಂದಿನ ಅಜೆಂಡಾ ಚರ್ಚಿಸಿ ವಾರದೊಳಗಾಗಿ ಮತ್ತೂಂದು ಸಭೆ ನಡೆಸುವಂತೆ ಸಲಹೆ ನೀಡಿದರು. ಪ್ರಕಾಶ್ ಹೆಗ್ಡೆ ಕೈಗೊಂಡ ನಿರ್ಣಯಗಳಿಗೆ ಬೆಲೆಯೇ ಇಲ್ಲ ಎಂದು ಉಮರ್ ವಿಷಾದಿಸಿದರು. ಅಧ್ಯಕ್ಷರು ಸರಿಯಾಗಿ ಸಭೆ ನಡೆಸಲಾಗುತ್ತಿಲ್ಲ ಎಂದಾದರೆ ರಾಜೀನಾಮೆ ನೀಡು ವುದು ಸೂಕ್ತ ಎಂದು ಕೆ.ಎಂ. ಮುಸ್ತಫ ಪ್ರಶ್ನಿಸಿದರು. ಡಿ. 28ಕ್ಕೆ ಮುಂದೂಡಿಕೆ
ಅಜೆಂಡಾ ಸೇರ್ಪಡೆಗೊಳಿಸಿ, ಇಲ್ಲವಾದಲ್ಲಿ ಸಭೆ ಮುಂದುವರಿಸಿ. ನಾನು ಮಾಧ್ಯಮದ ಮುಂದೆ ಎಲ್ಲವನ್ನೂ ತಿಳಿಸುವೆ. ಎಲ್ಲ ಅಧಿಕಾರಿಗಳು ಮನೆಗೆ ಹೋಗಬೇಕು. ನಗರದಲ್ಲಿ ಏನೇನು ನಡೆಯುತ್ತದೆ ಎಂಬುದು ಜನತೆಗೆ ತಿಳಿಯಬೇಕು ಎಂದು ಉಮ್ಮರ್ ಹೇಳಿದರು. ಸಭೆಯನ್ನು ಡಿ. 28ಕ್ಕೆ ಮುಂದೂಡಲಾಯಿತು. ಸಭೆ ಮುಂದೂಡಿಕೆ ಕಪ್ಪುಚುಕ್ಕೆ ಎಂದು ಗೋಕುಲ್‌ದಾಸ್ ಟೀಕಿಸಿದರು. ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ, ಮುಖ್ಯಾಧಿಕಾರಿ ಗೋಪಾಲ್ ನಾಯ್ಕ ಉಪಸ್ಥಿತರಿದ್ದರು. ಪ್ರಾರ್ಥನೆ
ವಾಹನ ಅಪಘಾತಕ್ಕೊಳಗಾದ ಸದಸ್ಯ ಪ್ರಕಾಶ್ ಹೆಗ್ಡೆ ಅವರು ಶೀಘ್ರ ಗುಣಮುಖರಾಗಲೆಂದು ಸಭೆಗೆ ಮೊದಲು ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ವಿಪಕ್ಷ ಸದಸ್ಯೆ ಪ್ರೇಮಾ ಟೀಚರ್ ಅವರು ಪ್ರಸ್ತಾವಿಸಿದರು. ಸದಸ್ಯರು ಪಕ್ಷಾತೀತವಾಗಿ ಪ್ರಾರ್ಥನೆ ಸಲ್ಲಿಸಿದರು.