ತಿ.ನರಸೀಪುರ: ಪ್ರಧಾನಿ ಮೋದಿಯವರ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ 40 ಸಾವಿರ ಕೋಟಿ ಅನುದಾನ ನೀಡಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಟಿ.ದೊಡ್ಡಪುರ ಗ್ರಾಪಂ ವ್ಯಾಪ್ತಿಯ ದೊಡ್ಡನಹುಂಡಿ ಗ್ರಾಮದಲ್ಲಿ ನರೇಗಾದಡಿ ಪ್ರಗತಿಯಲ್ಲಿರುವ ಕೆರೆ ಜೀರ್ಣೋದ್ದಾರ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿ, ನರೇಗಾ ಯೋಜನೆಗೆ ಪ್ರಧಾನಿ ಕೊರೊನಾ ಪ್ಯಾಕೇಜಿನಲ್ಲಿ ಇಷ್ಟೊಂದು ಪ್ರಮಾಣದ ಹಣವನ್ನು ಕೊಟ್ಟಿರೋದು ಹೆಮ್ಮೆಯ ವಿಷಯ ಎಂದರು.
ರಾಜ್ಯದಲ್ಲಿ ಉದ್ಯೋಗ ಅಪೇಕ್ಷಿಸಿ ಬರುವ ಜನರ ಸಂಖ್ಯೆ ನಿರೀಕ್ಷೆಯನ್ನು ಮೀರಿದೆ. 9.20 ಲಕ್ಷಕ್ಕೂ ಹೆಚ್ಚು ಜನರು ಒಂದೇ ದಿನ ಕೂಲಿ ಕೆಲಸವನ್ನು ಕಾರ್ಮಿಕರಾಗಿ ಮಾಡಿದ್ದಾರೆ. ಕೆರೆಕಟ್ಟೆಗಳನ್ನು ತುಂಬಿಸಿ, ಅಂತರ್ಜಲ ಅಭಿವೃದ್ಧಿಪಡಿಸುವ ಆಕಾಂಕ್ಷೆಯನ್ನು ಸರ್ಕಾರ ಇಟ್ಟುಕೊಂಡಿದೆ. ಉದ್ಯೋಗ ಮಾಡುವ ಅಪೇಕ್ಷಿತ ಕಾರ್ಮಿಕರಿಗೆ ನರೇಗಾದಲ್ಲಿ ಉದ್ಯೋಗ ನೀಡುತ್ತೇವೆ. ಕಾರ್ಮಿಕರಷ್ಟೇ ಅಲ್ಲ, ರೈತರನ್ನೂ ಕೂಡ ಕೇಂದ್ರೀಕರಿಸಿ 40 ಸಾವಿರ ಕೋಟಿ ಅನುದಾನವನ್ನು ಕೇಂದ್ರ ನೀಡಿದೆ ಎಂದರು.
ಸಚಿವ ಎಸ್.ಟಿ.ಸೋಮಶೇಖರ್, ತಾಪಂ ಇಒ ಜರಾಲ್ಡ ಎಂ.ರಾಜೇಶ್, ಪಂಚಾಯ್ತಿ ಅಭಿವೃದಿಟಛಿ ಅಧಿಕಾರಿ ಎಂ.ರಾಜಶೇಖರ, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಅಶ್ವಿನ್ ಕುಮಾರ್, ಸಿ.ರಮೇಶ್, ಕೆ.ನಂಜುಂಡಸ್ವಾಮಿ, ಡೀಸಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸದಸ್ಯ ಮಂಜುನಾಥನ್, ಗ್ರಾಪಂ ಅಧ್ಯಕ್ಷ ಎನ್.ಮರಿಸ್ವಾಮಿ, ಪುರಸಭೆ ಸದಸ್ಯ ಎಸ್. ಕೆ.ಕಿರಣ, ಕ್ಷೇತ್ರಾಧ್ಯಕ್ಷ ಕೆ.ಸಿ.ಲೋಕೇಶ, ಎಂ.ಚಂದ್ರಶೇಖರ, ಕೆ.ಮಹೇಶ, ಲಕ್ಷಣ್ ರಾವ್ ಹಾಜರಿದ್ದರು.