ಅಜೆಕಾರು: ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ 4 ಸಾವಿರ ಕುಟುಂಬಗಳಿಗೆ ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷಿಯ ಉಜ್ವಲ್-2 ಯೋಜನೆಯಡಿ ಅಡುಗೆ ಅನಿಲ ವಿತರಿಸಲಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ನೀರೆ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ನೀರೆ, ಬೈಲೂರು, ಎರ್ಲಪಾಡಿ, ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗಳ ಅರ್ಹ ಫಲಾನುಭವಿಗಳಿಗೆ ಉಜ್ವಲ 2 ಯೋಜನೆಯಡಿ ಉಚಿತ ಅಡುಗೆ ಅನಿಲ ವಿತರಣೆ ಹಾಗೂ ಸರಕಾರದ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.
ಸರಕಾರದಿಂದ ಸಿಗುವ ವಿವಧ ಯೋಜನೆಗಳ ಪ್ರಯೋಜನವನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಈ ಸಂದರ್ಭ ಹೇಳಿದರು. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಅತ್ಯಗತ್ಯವಾಗಿರುವ 166 ಕಾಲು ಸೇತುವೆಗಳ ನಿರ್ಮಾಣ ಶೀಘ್ರದಲ್ಲಿ ನಡೆಯಲಿದ್ದು ಕಾರ್ಕಳ ತಾಲೂಕನ್ನು ಮರ ಮುಕ್ತ ಕಾಲು ಸೇತುವೆಗಳನ್ನಾಗಿ ಮಾಡಲಾಗುವುದು ಎಂದರು.ಅಧ್ಯಕ್ಷತೆಯನ್ನು ನೀರೆ ಗಾ.ಪಂ. ಅಧ್ಯಕ್ಷರಾದ ಸದಾನಂದ ಪ್ರಭು ಅವರು ವಹಿಸಿದ್ದರು.
ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಬೈಲೂರು ಗ್ರಾ.ಪಂ. ಅಧ್ಯಕ್ಷೆ ಶ್ವೇತಾ ಪಿ.ಶೆಟ್ಟಿ, ಎರ್ಲಪಾಡಿ ಗ್ರಾ.ಪಂ. ಅಧ್ಯಕ್ಷ ವಸಂತ ಕುಲಾಲ್, ಪಳ್ಳಿ ಗ್ರಾ.ಪಂ. ಅಧ್ಯಕ್ಷರಾದ ಸಂಗೀತಾ ನಾಯಕ್, ನೀರೆ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ಪೂಜಾರಿ, ಬೈಲೂರು ಗ್ರಾ.ಪಂ.ಉಪಾಧ್ಯಕ್ಷ ಜಗದೀಶ್ ಪೂಜಾರಿ, ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ, ತಾ.ಪಂ.ಸದಸ್ಯೆ ನಿರ್ಮಲಾ, ವಿಜಯ ಸಾಲ್ಯಾನ್, ಗ್ಯಾಸ್ ಸಂಸ್ಥೆ ಮಾಲಿಕರಾದ ನಿತ್ಯಾನಂದ ಪೈ ಉಪಸ್ಥಿತರಿದ್ದರು.
ನೀರೆ ಗ್ರಾಮ ಪಂಚಾಯತ್ ಪಿಡಿಒ ಅಂಕಿತಾ ನಾಯಕ್ ಸ್ವಾಗತಿಸಿದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ಗ್ರಾಮ ಪಂಚಾಯತ್‌ಗಳ ಪಿಡಿಒ, ಕಾರ್ಯದರ್ಶಿ, ಸಿಬಂದಿಯವರು ಉಪಸ್ಥಿತರಿದ್ದರು. ಬೈಲೂರು ಪಿಡಿಒ ರವಿರಾಜ್ ವಂದಿಸಿದರು.