Advertisement

ಸಂಸದರಿಗಾಗಿ 400 ಹಳೆ ಕಟ್ಟಡಗಳ ಧ್ವಂಸಗೈದು ಹೊಸ ಫ್ಲ್ಯಾಟ್‌

09:14 AM Jun 18, 2019 | Vishnu Das |

ಹೊಸದಿಲ್ಲಿ: ಸಂಸದರ 400 ಹಳೆಯ ಫ್ಲ್ಯಾಟ್‌ಗಳನ್ನು ಧ್ವಂಸಗೈದು ನಿರ್ಮಾಣ ತ್ಯಾಜ್ಯ ಬಳಸಿಕೊಂಡು ಹೊಸ ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisement

ನಾರ್ಥ್ ಅವೆನ್ಯೂ ಮತ್ತು ಸೌಥ್‌ ಅವೆನ್ಯೂ ರಸ್ತೆಯಲ್ಲಿ ರಾಷ್ಟ್ರಪತಿ ಭವನದ ಆಕ್ಕಪಕ್ಕದಲ್ಲಿ 60 ವರ್ಷಗಳಿಗೂ ಹಳೆಯ ಫ್ಲ್ಯಾಟ್‌ಗಳನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ಸಾರ್ವಜನಿಕ ಸೇವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಾತಂತ್ರ್ಯಾನಂತರ ಸಂಸದರಿಗಾಗಿ ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಲಾಗಿತ್ತು.

ಹಳೆಯದನ್ನು ನೆಲ ಸಮ ಮಾಡಿದ ಬಳಿಕ ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಿರ್ಮಾಣ ತ್ಯಾಜ್ಯವನ್ನು ಸಂಸ್ಕರಿಸಿ ಬಳಸಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಪ್ರಮುಖ ನಿರ್ಮಾಣ ಸಂಸ್ಥೆಸಿಪಿಡಬ್ಲೂé ಡಿ 36 ಡ್ನೂಪೆಕ್ಸ್‌ ಫ್ಲ್ಯಾಟ್‌ಗಳನ್ನು 80 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು. ಹೊಸ ಫ್ಲ್ಯಾಟ್‌ಗಳು ನೂತನ ಜನಪ್ರತಿನಿಧಿಗಳ ವಾಸಕ್ಕಾಗಿ ಸಿದ್ಧಗೊಂಡಿವೆ.

Advertisement

ಹೊಸ ಕಟ್ಟಡಗಳು ನಿರ್ಮಾಣವಾದ ಬಳಿಕ ಅಲ್ಲಿ ಯಾವುದೇ ಅವ್ಯವಸ್ಥೆ ಇರುವುದಿಲ್ಲ. ಹೊಸ ಕಟ್ಟಡಗಳಲ್ಲಿ ಸೋಲಾರ್‌ ಪವರ್‌ ಪ್ಯಾನೆಲ್‌ಗ‌ಳು ಮತ್ತು ಪಾರ್ಕಿಂಗ್‌ ವ್ಯವಸ್ಥೆ ಗೆ ಅಧ್ಯತೆ ನೀಡಲಾಗಿದೆ.

ನೂತನ ಲೋಕಸಭಾ ಸದಸ್ಯರ ಪೈಕಿ 300 ಮಂದಿ ಮೊದಲ ಬಾರಿ ಆಯ್ಕೆಯಾದವರು.

ಸರ್ಕಾರ 350 ಸಂಸದರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ಹಿಂದೆ ನೂತನ ಸದಸ್ಯರು ಪಂಚತಾರಾ ಹೊಟೇಲ್‌ಗ‌ಳಲ್ಲಿ ಉಳಿದುಕೊಳ್ಳುವ ಪರಿಪಾಠವಿತ್ತು. ಆದರೆ ಲೋಕಸಭಾ ಸಚಿವಾಲಯದ ವೆಚ್ಚ ಕಡಿತ ಕ್ರಮಗಳನ್ನು ಅನುಸರಿಸಿ ಈ ಅಭ್ಯಾಸವನ್ನು ಈಗ ಕೈಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next