Advertisement

400 ಕಲಾವಿದರಿಗೆ ಜಾನಪದ ಪರಿಷತ್‌ನಿಂದ ನೆರವು

08:20 PM Jul 02, 2021 | Team Udayavani |

ಕೆರೂರ: ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ತಿಮ್ಮೆಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ಎಚ್‌.ಆರ್‌.ನಿರಾಣಿ ಸೇರಿದಂತೆ ಮುಂತಾದವರ ಸಹಕಾರ, ಪ್ರೋತ್ಸಾಹದೊಂದಿಗೆ ಜಿಲ್ಲೆಯ ಸುಮಾರು 400 ಜನ ಜನಪದ ಗ್ರಾಮೀಣ ಕಲಾವಿದರಿಗೆ ಆಹಾರ ಧಾನ್ಯಗಳ ಪೊಟ್ಟಣಗಳನ್ನು ವಿತರಿಸುವ ಯೋಜನೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.

Advertisement

ಇನಾಂ ಹುಲ್ಲಿಕೇರಿ, ಹಲಕುರ್ಕಿ, ಕೊಂಕಣಕೊಪ್ಪ, ಲಕ್ಕಸಕೊಪ್ಪ, ಅಗಸನ ಕೊಪ್ಪ, ಮಾಲಗಿ, ನರೇನೂರ, ಮತ್ತಿಕಟ್ಟಿ ಹಾಗೂ ಕಟಗೇರಿ ಗ್ರಾಮಗಳಲ್ಲಿ ಸಂಕಷ್ಟದಲ್ಲಿರುವ ಅನೇಕ ಕಲಾವಿದರಿಗೆ ಆಹಾರ ಪೊಟ್ಟಣ ವಿತರಿಸಿ ಅವರು ಮಾತನಾಡಿದರು. ಕಲಾವಿದರು ನಾಡಿನ ಸಾಂಸ್ಕೃತಿಕ ಲೋಕದ ವಾರಸುದಾರರು, ಆಧುನಿಕತೆಯ ಪರಿಣಾಮದಿಂದಾಗಿ ಅನೇಕ ಕಲೆಗಳು ನಶಿಸಿ ಹೋಗಿವೆ. ಅಳಿದುಳಿದ ಕಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದು ಅವಶ್ಯಕವಾಗಿದೆ. ಸಮಾಜದಲ್ಲಿ ಕಲಾವಿದರಿಗೆ ಉತ್ತೇಜನ, ಪ್ರೋತ್ಸಾಹ ನೀಡುವ ಪ್ರವೃತ್ತಿ ಹೆಚ್ಚಾಗಬೇಕಿದೆ ಎಂದು ಶಿವಾನಂದ ಶೆಲ್ಲಿಕೇರಿ ಅಭಿಪ್ರಾಯಪಟ್ಟರು.

ಬಾದಾಮಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಶಂಕರ ಹೂಲಿ, ಬಾದಾಮಿ ತಾಲ್ಲೂಕು ಕಜಾಪ ಅಧ್ಯಕ್ಷ ಸಿ.ಎಸ್‌. ನಾಗನೂರ, ಕಲಾವಿದರಾದ ಮಲ್ಲಿಕಾರ್ಜುನ ಪೂಜಾರಿ, ಮುಧೋಳ ತಾಲೂಕು ಕಜಾಪ ಅಧ್ಯಕ್ಷ ಆನಂದ ಪೂಜಾರಿ, ಸಾಹಿತಿಗಳಾದ ಮಲ್ಲಿಕಾರ್ಜುನ ಅರಬ್ಬಿ, ಕಲಾವಿದರಾದ ನಿಂಗಪ್ಪ ಮಲ್ಲಾಡದ, ಶಿಕ್ಷಕರಾದ ಎಂ.ಬಿ. ಕೋಟಿ, ಬಿ.ಸಿ.ಪ್ಯಾಟಿ, ತಮ್ಮ ಣ್ಣ ನಾಯಕ, ರಾಮಾರೂಢ ಬಡಿಗೇರ, ಯಲ್ಲಪ್ಪ ಕಟಗೇರಿ ಹಾಗೂ ಹಲಕುರ್ಕಿ, ಹುಲ್ಲಿಕೇರಿ ಮುಂತಾದ ಗ್ರಾಮಗಳ ಗ್ರಾಮೀಣ ಕಲಾವಿದರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next