Advertisement

ಸಾಲ ವಾಪಸ್‌ ನೀಡದ ಕಾರಣ ಮಹಿಳೆಯ ಅಪ್ರಾಪ್ತ ಮಗಳನ್ನು ವಿವಾಹವಾದ 40 ವರ್ಷದ ವ್ಯಕ್ತಿ

09:12 AM May 01, 2023 | Team Udayavani |

ಪಾಟ್ನಾ: 11 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ  ವ್ಯಕ್ತಿಯೊಬ್ಬನನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿರುವ ಘಟನೆ ಬಿಹಾರದ ಸಿವಾನ್ ನಲ್ಲಿ ನಡೆದಿದೆ.

Advertisement

ಲಕ್ಷ್ಮೀಪುರ ಗ್ರಾಮದ ನಿವಾಸಿ ಮಹೇಂದ್ರ ಪಾಂಡೆ (40) ಬಂಧಿತ ಆರೋಪಿ.

ಬಾಲಕಿಯ ತಾಯಿಗೆ ಆರೋಪಿ ಮಹೇಂದ್ರ ಪಾಂಡೆ 2 ಲಕ್ಷ ರೂ. ಸಾಲವನ್ನು ನೀಡಿದ್ದ. ಸಾಲವನ್ನು ಆಕೆ ವಾಪಾಸ್‌ ಕೊಡದ ಕಾರಣಕ್ಕೆ ಮಹೇಂದ್ರ ಮಹಿಳೆಯ ಅಪ್ರಾಪ್ತ ಮಗಳನ್ನು ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮೈರ್ವಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಈ ಬಗ್ಗೆ ದೂರು ನೀಡಿದ್ದು,ಆರೋಪಿಯನ್ನು ಪೋಕ್ಸೊ ಕಾಯಿದೆಯಡಿಯಲ್ಲಿ ಬಂಧಿಸಲಾಗಿದೆ.

ಬಂಧನದ ಬಳಿಕ ಬಾಲಕಿ ಹಾಗೂ ಆರೋಪಿ ತಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹವಾಗಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ.

Advertisement

ಆರೋಪಿ ಮಹೇಂದ್ರ ಪಾಂಡೆಗೆ ಈಗಾಗಲೇ ಒಂದು ಪತ್ನಿ ಇದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next