Advertisement

NDRF ಸಿಬಂದಿಗೆ ಶೇ.40 ಅಪಾಯ ಭತ್ತೆ: ಶಾ

01:19 AM Jun 30, 2024 | Team Udayavani |

ಹೊಸದಿಲ್ಲಿ: ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ)ನಲ್ಲಿ ಕಾರ್ಯನಿರ್ವಹಿಸುವ ರಕ್ಷಣ ಸಿಬಂದಿಗೆ ಶೇ.40 ಅಪಾಯ ಭತ್ತೆ (ರಿಸ್ಕ್ ಅಲೌವನ್ಸ್‌) ನೀಡುವುದಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಬಹುದಿನಗಳಿಂದಲೂ ಈ ಬೇಡಿಕೆ ಇತ್ತು. ಎನ್‌ಡಿಆರ್‌ಎಫ್ನ ಎಲ್ಲ 1,600 ಸಿಬಂದಿಗೆ ಈ ಭತ್ತೆ ದೊರೆಯಲಿದೆ ಎಂದು ಹೇಳಿದ್ದಾರೆ. ಹಿಮಾಚಲ ಪ್ರದೇಶದ 21,625 ಅಡಿ ಎತ್ತರದ ಮಣಿರಂಗ ಪರ್ವತ ಯಶಸ್ವಿಯಾಗಿ ಏರಿ ಬಂದ ಎನ್‌ಡಿಆರ್‌ಎಫ್ನ 35 ತಂಡವನ್ನು ಸ್ವಾಗತಿಸಿ ಈ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next