ಬ್ಯಾಡಗಿ: ರಾಜ್ಯಮಟ್ಟದಲ್ಲಷ್ಟೇ ಅಲ್ಲ ತಾಲೂಕಿನಲ್ಲೂ ಕೂಡ 40 ಪರ್ಸೆಂಟ್ ಕಮಿಷನ್ ಹಾವಳಿ ಸದ್ದು ಮಾಡುತ್ತಿದೆ. ಇದರಿಂದ ಬೇಸತ್ತ ಗುತ್ತಿಗೆದಾರರು ಗುಜರಿ ಅಂಗಡಿಯಲ್ಲಿ ಕಬ್ಬಿಣ ಖರೀದಿಸಿ ಕೆಲಸ ನಡೆಸುತ್ತಿದ್ದಾರೆ. ಹೀಗಾಗಿ, ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ ಎಂದು ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಿಂದ ಕೊರೊನಾದಿಂದ ತತ್ತರಿಸಿದ್ದ ಗುತ್ತಿಗೆದಾರರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಸ್ಥಳೀಯ ಶಾಸಕರ ಕಮಿಷನ್ ಹೊಡೆತಕ್ಕೆ ಬೇಸತ್ತ ಅವರು ಅನಿವಾರ್ಯವಾಗಿ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆಂದು ಆರೋಪಿಸಿದರು.
ವರ್ಗಾವಣೆ ಭಾಗ್ಯ: ಅಪ್ರಮಾಣಿಕ ಅಧಿಕಾರಿಗಳ ಬಳಿ ಲಕ್ಷಗಟ್ಟಲೆ ಹಣ ತಿಂದು, ಪ್ರಾಮಾಣಿಕ ಅಧಿಕಾರಿಗಳನ್ನು ತಾಲೂಕಿನಿಂದ ಎತ್ತಂಗಡಿ ಮಾಡಲಾಗುತ್ತಿದೆ. ಅಧಿಕಾರಿಗಳ ಮೇಲೆ ಶಾಸಕರ ದಬ್ಟಾಳಿಕೆ ಮುಂದುವರೆದಿದ್ದು, ಅಕ್ರಮ ಎಸಗುವಂತೆ ಖುದ್ದಾಗಿ ಅವರೇ ಸೂಚನೆ ನೀಡುತ್ತಿದ್ದಾರೆ. ಇಂತ ಹುದಕ್ಕೆ ಸೊಪ್ಪು ಹಾಕದ ಬಹಳಷ್ಟು ಉತ್ತಮ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ವರ್ಗಾವಣೆ ಭಾಗ್ಯ ನೀಡುತ್ತಿದ್ದಾರೆಂದು ದೂರಿದರು.
ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಅಕ್ರಮ: ತಾಲೂಕಿನಾದ್ಯಂತ ನಡೆದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಭಾರೀ ಪ್ರಮಾಣದ ಅವ್ಯಹಾರ ನಡೆಯುತ್ತಿದೆ. ಶಾಸಕರು ಮಳೆಗಾಲದಲ್ಲಿ ತುಂಬಿದ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಕೆರೆ ಹೂಳೆತ್ತುವ ಎಲ್ಲಾ ಕಾಮಗಾರಿಗಳ ಕುರಿತು ಕೂಡಲೇ ಸಮಗ್ರ ತನಿಖೆ ಮಾಡುವಂತೆ ಆಗ್ರಹಿಸಿದರು.
ಸಂಬಂಧಿಕರು ಬಿಟ್ಟ ಮೇಲೆ ಇನ್ನೊಬ್ಬರು: ಬ್ಯಾಡಗಿ ಮತಕ್ಷೇತ್ರದಲ್ಲಿ ಬಹುಪಾಲು ಗುತ್ತಿಗೆ ಕಾಮಗಾರಿ ಗಳನ್ನು ಸ್ಥಳೀಯ ಶಾಸಕರ ಸಂಬಂಧಿಕರು ಮತ್ತು ಆಪ್ತರು ನಡೆಸುತ್ತಿದ್ದಾರೆ. ಕಾಮಗಾರಿಗಳು ಅಧಿಕಾರಿಗಳ ಹಿಡಿತಕ್ಕೆ ಸಿಗದೇ ಕಳಪೆಯಾಗುತ್ತಿವೆ. ಇನ್ನೂ ಕಾಮಗಾರಿಗಳು ಸಿಗದೇ ಬೇಸರ ವ್ಯಕ್ತಪಡಿಸಿದ ಬಹಳಷ್ಟು ಗುತ್ತಿಗೆದಾರರು ಬೇರೊಂದು ಕ್ಷೇತ್ರದ ಬಾಗಿಲು ತಟ್ಟುತ್ತಿದ್ದಾರೆ ಎಂದರು.
ಸುಳ್ಳು ಕೇಸ್ ದಾಖಲು: ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ತಾಲೂಕಿನ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತಪ್ಪು ಮಾಡದವರ ವಿರುದ್ಧ ಸುಳ್ಳು ಕೇಸ್ ದಾಖಲಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬೇಸತ್ತ ಪೊಲೀಸ್ ಇಲಾಖೆಯ ಬಹುತೇಕ ಅಧಿಕಾರಿಗಳು ಯಾರಿಗೂ ಹೇಳದೇ ಕೇಳದೇ ವರ್ಗಾ ವಣೆ ಮಾಡಿಸಿಕೊಂಡು ತಾಲೂಕಿನಿಂದ ನಿರ್ಗಮಿಸು ತ್ತಿದ್ದಾರೆಂದು ಆರೋಪಿಸಿದರು. ಈ ವೇಳೆ ದುಗೇìಶ ಗೊಣೆಮ್ಮನವರ, ಬಿ.ಪಿ.ಚನ್ನಗೌಡ್ರ, ಮಂಜುನಾಥ ಬೋವಿ, ರಫಿಕ್ ಮುದ್ಗಲ್, ರಮೇಶ ಮೋಟೆಬೆನ್ನೂರ, ಉದಯ ಚೌಧರಿ, ರಾಜು ಲಮಾಣಿ ಇನ್ನಿತರರಿದ್ದರು.