Advertisement
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ದ ಸಮಿತಿಯೊಂದು ಇಂಥ ದೂರದೃಷ್ಟಿಯನ್ನು ಇರಿಸಿಕೊಂಡು ಕೆಲವು ಶಿಫಾರಸುಗಳನ್ನು ಮಾಡಿದೆ. “ಸಮ್ಮಿಶ್ರ ಶಿಕ್ಷಣ ಮತ್ತು ಕಲಿಕೆ’ ಎಂಬ ಕರಡು ವರದಿಯನ್ನು ಯುಜಿಸಿ ರೂಪಿಸಿದ್ದು, ಇದರಲ್ಲಿ ಆನ್‌ಲೈನ್ ಕಲಿಕೆಯನ್ನು ಶೇ. 40ರಷ್ಟು ಮುಂದುವರಿಸುವ ಬಗ್ಗೆ ಪ್ರಸ್ತಾವಿಸಲಾಗಿದೆ. ಈ ಕರಡನ್ನು ಯುಜಿಸಿ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ.
ಯುಜಿಸಿ ಸಮಿತಿ ಹೇಳಿರುವಂತೆ ವಿದ್ಯಾರ್ಥಿಗಳೇ ಇನ್ನು ಮುಂದೆ ಶಿಕ್ಷಕರು ಮತ್ತು ಪಾಠ ಮಾಡುವ ಸಮಯ ಆಯ್ದುಕೊಳ್ಳಬಹುದು. ತಮಗೆ ಬೇಕಾದ ಕೋರ್ಸ್‌ಗಳನ್ನೂ ರೂಪಿಸಿಕೊಳ್ಳಬಹುದು. ಆನ್‌ಲೈನ್ ಅಥವಾ ಆಫ್ ಲೈನ್ ಕಲಿಕೆ ಆಯ್ದುಕೊಳ್ಳಬಹುದು. ಪರೀಕ್ಷೆಗಳು ಬೇಡಿಕೆಗೆ ತಕ್ಕಂತೆ ನಡೆಯುತ್ತವೆ. ಎನ್‌ಇಪಿಯಂತೆ ಶಿಫಾರಸು
ರಾಷ್ಟ್ರೀಯ ಶಿಕ್ಷಣ ನೀತಿ 2020(ಎನ್‌ಇಪಿ)ರ ಪ್ರತಿಪಾದನೆಗಳಿಗೆ ಅನುಗುಣವಾಗಿ ಯುಜಿಸಿ ಸಮಿತಿ ಈ ಶಿಫಾರಸುಗಳನ್ನು ಮಾಡಿದೆ.
Related Articles
ಎಲ್ಲಕ್ಕಿಂತ ಮುಖ್ಯವಾಗಿ ಯುಜಿಸಿ ಸಮಿತಿ ಮುಂದಿನ ದಿನಗಳಲ್ಲಿ ಶೇ. 40ರಷ್ಟನ್ನು ಆನ್‌ಲೈನ್ ನಲ್ಲಿ ಮತ್ತು ಶೇ. 60ರಷ್ಟನ್ನು ಆಫ್ಲೈನ್ ನಲ್ಲಿ ಕಲಿಸುವ ಬಗ್ಗೆ ಶಿಫಾರಸು ಮಾಡಿದೆ. ಪರೀಕ್ಷೆಗಳನ್ನೂ ಈ ಎರಡೂ ಮಾದರಿಗಳಲ್ಲಿ ಮಾಡಬಹುದು ಎಂದು ಹೇಳಿದೆ.
Advertisement
ಸಮ್ಮಿಶ್ರ ಕಲಿಕೆಯಿಂದ ವಿದ್ಯಾರ್ಥಿಗಳ ಕೌಶಲ, ಮಾಹಿತಿ ಲಭ್ಯತೆ, ಹೆಚ್ಚಿನ ತೃಪ್ತಿ ಮತ್ತು ಕಲಿಕೆಯ ಫಲಿತಾಂಶ ಹೆಚ್ಚುತ್ತದೆ.ಈ ಸಮ್ಮಿಶ್ರ ಕಲಿಕೆಯಲ್ಲಿ ಶಿಕ್ಷಕರು ತರಬೇತುದಾರ ಮತ್ತು ಮಾರ್ಗದರ್ಶಕನಾಗಿ ಬದಲಾಗುತ್ತಾರೆ. ಪ್ರತ್ಯಕ್ಷ ತರಗತಿಗಳಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರಾದರೆ ಸಮ್ಮಿಶ್ರ ಕಲಿಕೆಯಲ್ಲಿ ವಿದ್ಯಾರ್ಥಿಗಳದ್ದೇ ಪ್ರಮುಖ ಪಾತ್ರ . ವಿದ್ಯಾರ್ಥಿಗಳ ಇಚ್ಛೆಯಂತೆ ಕಲಿಕೆ ಸಾಗುತ್ತದೆ. ಇದು ಆರಂಭದಲ್ಲಿ ಉನ್ನತ ಶಿಕ್ಷಣದಲ್ಲಿ ಜಾರಿಯಾಗಲಿದೆ ಎಂದು ಯುಜಿಸಿ
ಮೂಲಗಳು ತಿಳಿಸಿವೆ.