Advertisement

40 ಕಿ.ಮೀ. ದೂರದಿಂದ ಬಂದು ರಕ್ತದಾನ ಮಾಡಿದ ಮಹಿಳೆ

03:08 PM Jun 10, 2019 | Team Udayavani |

ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಗೆ ಆಂಧ್ರದ ಮಹಿಳೆ 40 ಕಿಲೋ ಮೀಟರ್‌ದೂರದಿಂದ ಆಗಮಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

Advertisement

ಹೌದು. ಜಿಲ್ಲಾಸ್ಪತ್ರೆಯಲ್ಲಿ ಸುರೇಶ ಕಂಬಳಿ ಎಂಬುವರ ಪತ್ನಿಗೆ ಹೆರಿಗೆಯಾಗಿತ್ತು. ಅವರಿಗೆ ಎ ಪಾಸಿಟಿವ್‌ ರಕ್ತದ ಅವಶ್ಯಕತೆಯಿದ್ದ ಹಿನ್ನೆಲೆಯಲ್ಲಿ ಸ್ವಾಸ್ಥ್ಯ ಮನಸ್ಸಿನ ತಂಡವು ಸಾಮಾಜಿಕ ಜಾಲತಾಣದಲ್ಲಿ ರಕ್ತದಾನ ಮಾಡುವಂತೆ ಮಾಹಿತಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಆಂಧ್ರ ಮೂಲದ ರತ್ನ ಎನ್ನುವ ಮಹಿಳೆ ಜಿಲ್ಲೆಯಲ್ಲಿಯೇ ನೆಲೆಸಿದ್ದು, ಮಾಹಿತಿ ತಿಳಿದು 40 ಕಿ.ಮೀ. ದೂರದಿಂದ ಆಗಮಿಸಿ ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇವರು ಬೂದಗುಂಪಾ ಸಮೀಪದಲ್ಲಿ ಕೃಷಿ ನರ್ಸರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next