Advertisement

ದಿಢೀರ್‌ ಬಿರುಗಾಳಿ, ಮಳೆಗೆ 50 ಸಾವು

08:20 AM May 14, 2018 | Team Udayavani |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ರವಿವಾರ ಸಂಜೆಯ ಬಳಿಕ ಏಕಾಏಕಿ ಬೀಸಿದ ಪ್ರಬಲ ಧೂಳು ಬಿರುಗಾಳಿಯಿಂದ ಜನ ಭೀತಿಗೊಳಗಾದರು. ಗಾಳಿ-ಮಳೆಗೆ ದಿಲ್ಲಿಯಲ್ಲಿ ಇಬ್ಬರು, ಸಿಡಿಲಿಗೆ ಪಶ್ಚಿಮ ಬಂಗಾಲದಲ್ಲಿ  12, ಉತ್ತರಪ್ರದೇಶದಲ್ಲಿ 18, ಆಂಧ್ರದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ.

Advertisement

ದಿಲ್ಲಿಯಲ್ಲಿ ಗಂಟೆಗೆ 109 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿಯ ರಭಸಕ್ಕೆ ಕೆಲವು ಸಮಯ ಜನಜೀವನವೇ ಅಸ್ತವ್ಯಸ್ತಗೊಂಡಿತು. 200ಕ್ಕೂ ಹೆಚ್ಚು ಮರಗಳು ಉರುಳಿವೆ. ವಿಮಾನ ಸಂಚಾರ ಮತ್ತು ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 60ಕ್ಕೂ ಹೆಚ್ಚು ವಿಮಾನಗಳ ಸಂಚಾರಕ್ಕೆ ಸಮಸ್ಯೆಯಾಯಿತು. ಹರ್ಯಾಣ, ಪಂಜಾಬ್‌, ನೋಯ್ಡಾದ ಭಾಗಗಳಲ್ಲಿ ಭಾರೀ ಧೂಳು ಬಿರುಗಾಳಿ ಬೀಸಿದೆ. ಜತೆಗೆ ಧಾರಾಕಾರ ಮಳೆಯಾಗಿದೆ. ಗುಡುಗು, ಸಿಡಿಲು, ಮಳೆ ಪ್ರಕೋಪಕ್ಕೆ ಆಂಧ್ರಪ್ರದೇಶದಲ್ಲಿ 9 ಮಂದಿ ಅಸುನೀಗಿ, ಮೂವರು ಗಾಯಗೊಂಡಿದ್ದಾರೆ. ದಿಲ್ಲಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದಿಲ್ಲಿಯ ಅಲ್ಲಲ್ಲಿ ವಿದ್ಯುತ್‌ ಕಂಬಗಳೂ ಮುರಿದು ಬಿದ್ದಿವೆ. ರಭಸವಾಗ ಧೂಳು -ಗಾಳಿಯಿಂದಾಗಿ ವಾಹನ ಸಂಚಾರವೂ ಅಸ್ತವ್ಯಸ್ತಗೊಂಡಿತು. 

ಮುನ್ಸೂಚನೆ: ಇದೇ ವೇಳೆ ಬುಧವಾರದವರೆಗಿನ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಪ್ರಬಲವಾಗಿ ಧೂಳಿನ ಬಿರುಗಾಳಿ ಬೀಸಲಿದೆ ಎಂದು ಹೇಳಿದೆ. ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಗುಡುಗು ಸಿಡಿಲಿನ ಸಹಿತ ಮಳೆಯಾಗಲಿದೆ. ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಪ್ರಮುಖ ಸ್ಥಳಗಳಲ್ಲಿ ಧೂಳಿನ ಬಿರುಗಾಳಿ ಬೀಸಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ. 

ಸಾವಿನ ಸಂಖ್ಯೆ
12 :
ಪಂ.ಬಂಗಾಲ
18 : ಉ. ಪ್ರದೇಶ
09 : ಆಂಧ್ರಪ್ರದೇಶ
02 : ದಿಲ್ಲಿ
ದಿಲ್ಲಿಯಲ್ಲಿ ಗಂಟೆಗೆ 109 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ

Advertisement

Udayavani is now on Telegram. Click here to join our channel and stay updated with the latest news.

Next