Advertisement
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕರಾವಳಿಗೆ ಬಜೆಟ್ ಅನುದಾನ ಕಡಿಮೆ ಆಗಿದೆ. ಪಿಡಬ್ಲೂಡಿ ರಸ್ತೆಗಳಿಗೆ ವಿಶೇಷ ಪ್ಯಾಕೇಜ್ ಬೇಕು. ರಸ್ತೆ ಕಾಮಗಾರಿಗಳಿಗೆ ವೇಗ ನೀಡಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಸುರಕ್ಷತೆ ದೃಷ್ಟಿಯಿಂದ ಘಾಟಿ ರಸ್ತೆಗೆ 1 ಕೋಟಿ ರೂ. ಹೆಚ್ಚು ಅನುದಾನ ತೆಗೆದಿಡಬೇಕು. ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ನಡುವೆ ಶೌಚಾಲಯ, ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಲು ಆದೇಶ ಹೊರಡಿಸಲಾಗಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡುತ್ತಾ, ರಾಷ್ಟ್ರೀಯ ಹೆದ್ದಾರಿಯ ಕೆಲಸ ಮುಗಿದಿದೆ. ಇದರಲ್ಲಿ ರೇವಣ್ಣ ಅವರ ಜವಾಬ್ದಾರಿ ಇತ್ತು. ಇನ್ನು ಮುಂದೆ ಆಗಬೇಕಾದ ಕೆಲಸ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಆಗಬೇಕು. ಇದರ ಜವಾ ಬ್ದಾರಿಯನ್ನು ಸಂಸದ ನಳಿನ್ ಕುಮಾರ್ ತೆಗೆದುಕೊಳ್ಳಬೇಕು. ರಾ. ಹೆದ್ದಾರಿ ಹಾಗೂ ರಾ. ಹೆದ್ದಾರಿ ಪ್ರಾಧಿಕಾರ ಎರಡೂ ಬೇರೆ ಬೇರೆ ಎಂದರು. ನಡುವೆ ಮಾತನಾಡಿದ ಸಂಸದ ನಳಿನ್ ಕುಮಾರ್, ಈ ವೇದಿಕೆಯಲ್ಲಿ ರಾಜಕೀಯದ ಮಾತು ಬೇಡ ಎಂದರು. ಮಾತು ಮುಂದುವರಿಸಿದ ರಮಾನಾಥ ರೈ, ತಾನು ಹೇಳುವುದರಲ್ಲಿ ತಪ್ಪಿಲ್ಲ. ಸತ್ಯ ಹೇಳಿದರೆ ಕೆಲವರಿಗೆ ಆಗುವುದಿಲ್ಲ ಎಂದು ಮಾತನ್ನು ತೇಲಿಸಿ ಬಿಟ್ಟರು. ರೇವಣ್ಣ ಹಾಗೂ ಯು.ಟಿ. ಖಾದರ್ ಅವರು ಪರಿಶೀಲನೆ ನಡೆಸಿ ಕಾಮಗಾರಿ ಗಳಿಗೆ ವೇಗ ನೀಡುವ ಕೆಲಸ ಆಗ ಬೇಕು ಎಂದರು.