Advertisement

ನಾಲ್ಕು ವರ್ಷದ ಬಾಲಕನಿಂದ ಸಹಪಾಠಿಗೆ ಲೈಂಗಿಕ ಕಿರುಕುಳ!

07:50 AM Nov 24, 2017 | Team Udayavani |

ಹೊಸದಿಲ್ಲಿ: ಸ್ಮಾರ್ಟ್‌ಫೋನ್‌, ಡಿಜಿಟಲ್‌ ಜೀವನದ ಈ ಕಾಲಘಟ್ಟದಲ್ಲಿ ಮುಗ್ಧ ಮಕ್ಕಳೂ ಕ್ರಿಮಿನಲ್‌ಗ‌ಳಾಗುತ್ತಿ ರುವುದನ್ನು ಸಾರುತ್ತಿರುವ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ತಾಜಾ ಸೇರ್ಪಡೆಯೆಂಬಂತೆ, ದಿಲ್ಲಿಯ 4 ವರ್ಷದ ಬಾಲಕಿಯೊಬ್ಬಳು ಅದೇ ವಯಸ್ಸಿನ ತನ್ನ ಸಹಪಾಠಿಯಿಂದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಳೆ!

Advertisement

ಇಲ್ಲಿನ ಮ್ಯಾಕ್ಸ್‌ಫೋರ್ಟ್‌ ಶಾಲೆಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿಗೆ ಆಕೆಯ ಸಹಪಾಠಿ ತನ್ನಲ್ಲಿನ ಪೆನ್ಸಿಲ್‌ ಅನ್ನು ಚೂಪುಗೊಳಿಸಿ ಆಕೆಯ ಗುಪ್ತಾಂಗದೊಳಕ್ಕೆ ಹಾಕಿ ಗಾಯಗೊಳಿಸಿದ್ದಾನೆ. ಕಳೆದ ಶುಕ್ರವಾರ ಈ ಘಟನೆ ನಡೆದಿದೆ. ಶಾಲೆಯಿಂದ ಮನೆಗೆ ಬಂದ ಬಾಲಕಿಯು ತನ್ನ ಪರಿಸ್ಥಿತಿಯನ್ನು ವಿವರಿಸಿದಾಗ ಪೋಷಕರಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ದು ಖಾತ್ರಿಯಾಗಿದೆ. ಬಾಲಕನ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರಾದರೂ, ಬಾಲಾಪರಾಧಿಯ ವಯಸ್ಸು ಕನಿಷ್ಠ 7 ಆಗಿರಬೇಕಿರುವುದರಿಂದ ಈ ಪ್ರಕರಣದಲ್ಲಿ ಹುಷಾರಾಗಿ ಹೆಜ್ಜೆಯಿಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next