Advertisement

ಬಡ ಕಾರ್ಮಿಕರಿಗೆ 4 ಸಾವಿರ ಕಿಟ್‌ ವಿತರಣೆ: ಮಾಳಶೆಟ್ಟಿ

05:45 PM Apr 27, 2020 | Suhan S |

ಗದಗ: ಮಹಾಮಾರಿ  ಕೋವಿಡ್ 19 ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ತೊಂದರೆಯಲ್ಲಿರುವ ಬಡವರು ಹಾಗೂ ನಿರ್ಗತಿಕರಿಗೆ ಗದಗ ಗ್ರೇನ್‌ ಮಾರ್ಕೆಟ್‌ ಸಗಟು ವ್ಯಾಪಾರಸ್ಥರ ಸಂಘ, ದಲಾಲ ವರ್ತಕರ ಸಂಘ, ಗ್ರೇನ್‌ ಮಾರ್ಕೆಟ್‌ ಕಿರುಕುಳ ವ್ಯಾಪಾರಸ್ಥರು ಹಾಗೂ ಇತರೆ ಜನರ ಸಹಕಾರದಿಂದ ನಾಲ್ಕು ಸಾವಿರ ಕಿಟ್‌ ವಿತರಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಹೇಳಿದರು.

Advertisement

ನಗರದ ತೇರಾಪಂಥ ಸಭಾಂಗಣದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 1500 ಕಿಟ್‌ಗಳನ್ನು ವಿತರಿಸಿದ್ದು, ಸದ್ಯ ಸಾವಿರ ಕಿಟ್‌ ಗಳು ಸಿದ್ಧಗೊಳುತ್ತಿವೆ. ಅವಳಿ ನಗರದಲ್ಲಿ ಪ್ರದೇಶವಾರು ಬಡವರನ್ನು ಗುರುತಿಸಿ, ಕಿಟ್‌ಗಳನ್ನು ಆಯಾ ಪ್ರದೇಶದ ಹಿರಿಯರ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವರ್ತಕರ ಸಂಘಟನೆಗಳೊಂದಿಗೆ ವಿವಿಧ ಬ್ಯಾಂಕ್‌ಗಳು ಕೂಡ ಕೈಜೋಡಿಸಿವೆ. ಕೆನರಾ ಬ್ಯಾಂಕ್‌ನವರು 50 ಸಾವಿರ ರೂ., ಅರ್ಬನ್‌ ಮರ್ಚಂಟ್ಸ್‌ ಬ್ಯಾಂಕ್‌ನವರು 10 ಸಾವಿರ ರೂ. ಹಾಗೂ ಸ್ಟೇಟ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌ನ ವ್ಯವಸ್ಥಾಪಕರು ಕೂಡ ವೈಯಕ್ತಿಕವಾಗಿ ದೇಣಿಗೆ ನೀಡಿದ್ದಾರೆ ಎಂದು ಹೇಳಿದರು.

ಆಹಾರ ಸಾಮಗ್ರಿಗಳ ಕಿಟ್‌ ಪಡೆಯುವಾಗ ಕೆಲವರಿಗೆ ಮುಜುಗರವಾಗುತ್ತದೆ. ಇದನ್ನು ತಪ್ಪಿಸಲು ಕಿಟ್‌ ವಿತರಣೆ ವೇಳೆ ´ಫೋಟೋ ತೆಗೆಯುತ್ತಿಲ್ಲ. ಆದರೆ, ಫಲವಾನುಭವಿಗಳ ಸಮಗ್ರ ಮಾಹಿತಿ ನಮ್ಮಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಕಿರುಕುಳ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಮೇಲಗಿರಿ ಮಾತನಾಡಿದರು. ವ್ಯಾಪಾರಸ್ಥರ ಸಂಘದ ಅಧ್ಯಕ್ಷ  ಧೀರಜ ಜೈನ್‌, ದಲಾಲ ವರ್ತಕರ ಸಂಘದ ಅಧ್ಯಕ್ಷ ಹುಚ್ಚಣ್ಣ ಶಹಾಪೂರ, ಖಜಾಂಚಿ ಈರಣ್ಣ ಬಾಳಿಕಾಯಿ, ವಿಶ್ವನಾಥ ರಾಮನಕೊಪ್ಪ, ಮಂಜುನಾಥ ವೀರಲಿಂಗಯ್ಯನಮಠ, ಶಂಭು ಕಾರಕಟ್ಟಿ, ಸಿದ್ದಣ್ಣ ಮಲ್ಲಾಡದ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next