Advertisement

ಕಾಶ್ಮೀರದಲ್ಲಿ ಮುಂದುವರಿದ ಅಟ್ಟಹಾಸ: ಭದ್ರತಾ ಪಡೆಯ ಎನ್ ಕೌಂಟರ್ ಗೆ ನಾಲ್ವರು ಉಗ್ರರು ಬಲಿ

09:01 AM Apr 23, 2020 | Nagendra Trasi |

ಜಮ್ಮು-ಕಾಶ್ಮೀರ:ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಉಗ್ರರು ಹತ್ಯೆಗೀಡಾಗಿರುವ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ವರದಿ ತಿಳಿಸಿದೆ.

Advertisement

ಝೈನಾಪೋರಾ ಗ್ರಾಮದ ಮೆಲ್ ಹೋರಾ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಜಮ್ಮು-ಕಾಶ್ಮೀರ ಪೊಲೀಸರು, 55ನೇ ರಾಷ್ಟ್ರೀಯ ರೈಫಲ್ಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ವರದಿ ವಿವರಿಸಿದೆ.

ಕಳೆದ ಒಂದು ತಿಂಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ನಡೆಸಿದ ಎನ್ ಕೌಂಟರ್ ನಲ್ಲಿ ಒಟ್ಟು ಆರು ಮಂದಿ ಉಗ್ರರು ಹತ್ಯೆಗೀಡಾದಂತಾಗಿದೆ. ಅಲ್ಲದೇ ಏಪ್ರಿಲ್ 6ರಂದು ಕುಪ್ವಾರ ಜಿಲ್ಲೆಯ ಕೇರಾನ್ ಸೆಕ್ಟರ್ ನಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಯ ಐವರು ಕಮಾಂಡೋಗಳು ಹುತಾತ್ಮರಾಗಿದ್ದರು.

ಭಾರತ ಸೇರಿದಂತೆ ಇಡೀ ಜಗತ್ತು ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿದ್ದರೆ, ಪಾಕಿಸ್ತಾನ ಉಗ್ರರನ್ನು ರಫ್ತು ಮಾಡುವುದರಲ್ಲಿ ತಲ್ಲೀನವಾಗಿದೆ ಎಂದು ಭಾರತೀಯ ಸೇನಾಪಡೆಯ ಮುಖ್ಯಸ್ಥ ನರಾವಣೆ ಆಕ್ರೋಶವ್ಯಕ್ತಪಡಿಸಿದ್ದನ್ನು ನೆನಪಿಸಿಕೊಳ್ಳಬಹುದು. ಗಡಿಭಾಗದಲ್ಲಿ ಸತತವಾಗಿ ಉಗ್ರರ ಉಪಟಳ ಹೆಚ್ಚಾಗಿರುವುದಾಗಿ ಸೇನೆಯ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next