Advertisement
ಕುಡಿಯುವ ನೀರಿನ ಸಮಸ್ಯೆ: ರಾಜ್ಯದ ಮಲೆನಾಡು, ಕರಾವಳಿ ಸೇರಿದಂತೆ ಬಯಲು ಸೀಮೆ ಪ್ರದೇಶದಲ್ಲಿ ಮಳೆ ಆರ್ಭಟ ಜೋರಾಗಿದೆ. ನೆರೆ ಸಂಭವಿಸುತ್ತಿದ್ದರೂ ತಾಲೂಕಿನಲ್ಲಿ ಮಾತ್ರ ಭೀಕರ ಬರಗಾಲ ತಾಂಡವವಾಡುತ್ತಿದೆ. ಸಾವಿರಾರು ಮಂದಿ ಕುಡಿ ಯುವ ನೀರಿನ ಸಮಸ್ಯೆಗೆ ಸಿಲುಕಿದ್ದಾರೆ. ಜಾನುವಾರ ಗಳಿಗೆ ಮೇವಿನ ಕೊರತೆ ಉಂಟಾಗಿದೆ. ತಾಲೂಕಿನಲ್ಲಿ ನೀರಿನ ಸಮಸ್ಯೆ ಇದ್ದರೂ ಹೇಮಾವತಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ನಾಲೆ ಮೂಲಕ ಕೆರೆ ಕಟ್ಟೆ ತುಂಬಿಸಲು ಜಿಲ್ಲಾಡಳಿತ ಮುಂದಾಗದೆ ಇರುವುದರಿಂದ ಅಂತರ್ಜಲವೂ ಕುಸಿಯುತ್ತಿದೆ.
Related Articles
Advertisement
ಮೇವು ಬ್ಯಾಂಕ್: ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು ಶ್ರವಣಬೆಳಗೊಳ ಹೋಬಳಿ ಸುಂಡಹಳ್ಳಿ ಗ್ರಾಮದಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಇನ್ನು ಉಳಿದ ಹೋಬಳಿ ಕೇಂದ್ರದಲ್ಲಿ ಮೇವು ಬ್ಯಾಂಕ್ ತೆರೆಯುವ ವಿಶ್ವಾಸವನ್ನು ತಾಲೂಕು ಆಡಳಿತ ರೈತರಿಗೆ ನೀಡಿತ್ತು. ಆದರೆ ಈಗ ವರುಣನ ಕೃಪೆಯಿಂದ ಹೊಲ ಗದ್ದೆಗಳಲ್ಲಿ ಹಸಿರು ಹುಲ್ಲು ಚಿಗುರುತ್ತಿದ್ದು ತಕ್ಕ ಮಟ್ಟಿಗೆ ಮೇವಿನ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆಯಿದ್ದು ತಾಲೂಕು ಆಡಳಿತಕ್ಕೆ ನೆಮ್ಮದಿ ತಂದಿದೆ.
•ನೀರಿನ ಸಮಸ್ಯೆ ಇದ್ದರೂ ಹೇಮಾವತಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ.
•ನಾಲೆ ಮೂಲಕ ಕೆರೆ ಕಟ್ಟೆ ತುಂಬಿಸಲು ಜಿಲ್ಲಾಡಳಿತ ಮುಂದಾಗದೆ ಇರುವುದರಿಂದ ಅಂತರ್ಜಲವೂ ಕುಸಿಯುತ್ತಿದೆ.
•ಆಶ್ಲೇಷಾ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆ; ಅಧಿಕಾರಿಗಳ ಮಾಹಿತಿ
ಮಳೆ ಬಿದ್ದರೂ ಕೆರೆ ಕಟ್ಟೆಗೆ ನೀರು ಬಂದಿಲ್ಲ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆ ಆಗುತ್ತಿದೆ. ಆದರೆ ತಾಲೂಕಿನಲ್ಲಿ ಮಾತ್ರ ಕೆರೆ ಕಟ್ಟೆಗೆ ನೀರು ಬರುವ ಮಳೆ ಆಗುತ್ತಿಲ್ಲ. ಕೃಷಿ ಚಟುವಟಿಕೆಗೆ ಅಗತ್ಯ ಇರುವಷ್ಟು ಮಳೆ ಸುರಿಯುತ್ತಿದೆ. ಇನ್ನು ಕೆಲ ಭಾಗದಲ್ಲಿ ತೆಂಗಿನ ಮರಗಳು ಒಣಗುತ್ತಿದ್ದು ಅವುಗಳಿಗೆ ಈಗ ತಕ್ಕ ಮಟ್ಟಿಗೆ ನೀರು ದೊರೆಯುತ್ತಿದೆ. ಇನ್ನು ಕೃಷಿ ಚಟುವಟಿಕೆ ಮಾಡಲು ಕೃಷಿ ಭೂಮಿ ತೇವವಾಗಿವೆ. ಬಿಸಿಲಿನ ತಾಪಕ್ಕೆ ಬೆಂಗಾಡಾಗುತ್ತಿದ್ದ ಅರೆ ಮಲೆನಾಡಿಗೆ ಆಶ್ಲೇಷಾ ಮಳೆ ಆಗಮನದಿಂದ ರೈತರು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಆಗಿದೆ.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ