Advertisement

ಉಗ್ರ ನಂಟು: ಜಾಲಂಧರದಲ್ಲಿ 4 ವಿದ್ಯಾರ್ಥಿಗಳು arrest,ಶಸ್ತ್ರಾಸ್ತ ವಶ

05:00 PM Oct 10, 2018 | Team Udayavani |

ಹೊಸದಿಲ್ಲಿ : ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕನಿಷ್ಠ ನಾಲ್ಕು ವಿದ್ಯಾರ್ಥಿಗಳನ್ನು ಪೊಲೀಸರು ಜಾಲಂಧರದಲ್ಲಿ ಬಂಧಿಸಿದ್ದಾರೆ. 

Advertisement

ಬಂಧಿತ ವಿದ್ಯಾರ್ಥಿಗಳನ್ನು ಝಹೀದ್‌ ಗುಲ್‌ಜಾರ್‌, ಮೊಹಮ್ಮದ್‌ ಇದ್ರಿಸ್‌ ಶಾ, ನದೀಮ್‌ ಮತ್ತು ಯೂಸುಫ್ ರಫೀಕ್‌ ಭಟ್‌ ಎಂದು ಗುರುತಿಸಲಾಗಿದೆ. 

ಪಂಜಾಬ್‌ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿರುವ ಈ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ವಶಪಡಿಕೊಳ್ಳಲಾಗಿದೆ. 

ಬಂಧಿತ ವಿದ್ಯಾರ್ಥಿಗಳಿಗೆ ಅನ್ಸಾರ್‌ ಗಝವತ್‌ ಉಲ್‌ ಹಿಂದ್‌ ಮತ್ತು ಜೈಶ್‌ ಎ ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಗಳೊಂದಿಗೆ ನಂಟಿರುವುದು ಗೊತ್ತಾಗಿದೆ ಎಂದು “ದಿ ಕಾಶ್ಮೀರ್‌ ಮಾನಿಟರ್‌’ ವರದಿ ಮಾಡಿದೆ. 

ಜಮ್ಮು ಕಾಶ್ಮೀರದ ಈ ಜಾಲದ ನಿರ್ವಾಹಕನನ್ನು ಕೂಡ ಬಂಧಿಸಿದ್ದು ಆತನನ್ನು ಈಗ ತೀವ್ರವಾಗಿ ಪ್ರಶ್ನಿಸಲಾಗುತ್ತಿದೆ. 

Advertisement

ಜಮ್ಮು ಕಾಶ್ಮೀರ ಪೊಲೀಸರು ಟ್ವಿಟರ್‌ನಲ್ಲಿ ಈ ದಾಳಿ ಕಾರ್ಯಾಚರಣೆ, ಬಂಧನ ಇತ್ಯಾದಿಗಳನ್ನು ದೃಢೀಕರಿಸಿದ್ದಾರೆ. 

ಪೊಲೀಸರ ಈ ಜಂಟಿ ದಾಳಿಯು ಇಂದು ಬುಧವಾರ ನಸುಕಿನ ವೇಲೆ ನಡೆದಿದ್ದು ಸುಮಾರು 90 ಪೊಲೀಸರು ಇದರಲ್ಲಿ ಭಾಗಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next