Advertisement

ಕೊಕ್ಕರೆ ಬೆಳ್ಳೂರಿನಲ್ಲಿ 4 ಪೆಲಿಕಾನ್‌ಗಳ ಸಾವು

06:25 AM Feb 12, 2018 | |

ಭಾರತೀನಗರ (ಮಂಡ್ಯ): ಇಲ್ಲಿಗೆ ಸಮೀಪದ ಕೊಕ್ಕರೆಬೆಳ್ಳೂರು ಪಕ್ಷಿಧಾಮದಲ್ಲಿ ಮರದಿಂದ ಕೆಳಗೆ ಬಿದ್ದು ಅಸ್ವಸ್ಥಗೊಂಡಿದ್ದ ಐದು ಪೆಲಿಕಾನ್‌ ಹಕ್ಕಿಗಳಲ್ಲಿ 4 ಪಕ್ಷಿಗಳು ಸಾವನ್ನಪ್ಪಿವೆ. ಮತ್ತೂಂದರ ಸ್ಥಿತಿ ಗಂಭೀರವಾಗಿದೆ.]

Advertisement

ಇದರೊಂದಿಗೆ ಹೆಜಾjರ್ಲೆಗಳ ಸರಣಿ ಸಾವು ಮುಂದುವರೆದಿದೆ. ಸಾವಿಗೆ ಕಾರಣ ಇನ್ನೂ ನಿಗೂಢವಾಗಿದೆ. ಸಾವನ್ನಪ್ಪಿರುವ ಹೆಜ್ಜೆರ್ಲೆಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಅವುಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಮಧ್ಯಪ್ರದೇಶದ ಲ್ಯಾಬ್‌, ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ಅಧಿಕಾರಿಗಳು ಈಗಾಗಲೇ ಕೊಕ್ಕರೆಬೆಳ್ಳೂರು ಹಾಗೂ ರಂಗನತಿಟ್ಟು ಪಕ್ಷಿಧಾಮಗಳಲ್ಲಿ ಪೆಲಿಕಾನ್‌ಗಳ ಹಿಕ್ಕೆ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದ್ದರೂ ಅದರ ಫ‌ಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಹೆಜಾjರ್ಲೆಗಳ ಸತತ ಸಾವಿನ ಹಿನ್ನೆಲೆಯಲ್ಲಿ ಕೊಕ್ಕರೆಬೆಳ್ಳೂರಿಗೆ ಇಂಡೋ-ಜರ್ಮನ್‌ ಸಹಭಾಗಿತ್ವದಲ್ಲಿ ವಿದೇಶದಿಂದ ತಜ್ಞರು ಆಗಮಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next