Advertisement

Uttar Pradesh: ಹಳಿ ತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ ಪ್ರೆಸ್‌ ರೈಲು; ನಾಲ್ವರು ಮೃತ್ಯು

05:00 PM Jul 18, 2024 | Team Udayavani |

ನವದೆಹಲಿ: ಚಂಡೀಗಢ-ದಿಬ್ರುಗಢ ಎಕ್ಸ್‌ ಪ್ರೆಸ್‌ ರೈಲಿನ ಹಲವು ಬೋಗಿಗಳು ಹಳಿ ತಪ್ಪಿದ ಪರಿಣಾಮ ನಾಲ್ವರು ಪ್ರಯಾಣಿಕರು ಸಾವಿಗೀಡಾಗಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಗುರುವಾರ (ಜುಲೈ 18) ಉತ್ತರಪ್ರದೇಶದ ಗೋಂಡಾದಲ್ಲಿ ನಡೆದಿದೆ.

Advertisement

ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಪ್ರಯಾಣಿಕರು ತಮ್ಮ ಲಗೇಜ್‌ ಗಳನ್ನು ಹಿಡಿದುಕೊಂಡು ರೈಲು ಹಳಿ ಸಮೀಪದಲ್ಲಿ ನಿಂತಿರುವ ದೃಶ್ಯ ಟಿವಿ ಮಾಧ್ಯಮದಲ್ಲಿ ಪ್ರಸಾರವಾಗಿದೆ.

ಚಂಡೀಗಢದಿಂದ ಅಸ್ಸಾಂನ ದಿಬ್ರುಗಢಕ್ಕೆ ರೈಲು ತೆರಳುತ್ತಿತ್ತು. ಈ ಸಂದರ್ಭದಲ್ಲಿ ಉತ್ತರಪ್ರದೇಶದ ಗೋಂಡಾ ಮತ್ತು ಝಿಲಾಹಿ ನಡುವಿನ ಪಿಕೌರಾದಲ್ಲಿ ರೈಲು ಹಳಿ ತಪ್ಪಿರುವ ಘಟನೆ ನಡೆದಿತ್ತು.

Advertisement

15 ಆಂಬುಲೆನ್ಸ್‌ ಗಳಲ್ಲಿ 40 ಮಂದಿ ಮೆಡಿಕಲ್‌ ಟೀಮ್‌ ಸ್ಥಳಕ್ಕೆ ಆಗಮಿಸಿದ್ದು, ಇನ್ನಷ್ಟು ಆಂಬುಲೆನ್ಸ್‌ ಗಳು ಅಪಘಾತ ನಡೆದ ಸ್ಥಳಕ್ಕೆ ತೆರಳುತ್ತಿರುವುದಾಗಿ ವರದಿ ತಿಳಿಸಿದೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಮಾರ್ಗದರ್ಶನ ನೀಡುತ್ತಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next