Advertisement

ಎಪಿಎಂಸಿ ಯಲ್ಲಿ 4 ನೂತನ ಗೋದಾಮು ಕೊಠಡಿ

01:54 AM Jul 01, 2019 | sudhir |

ಉಡುಪಿ: ಉತ್ಪನ್ನ ಮಾರಾಟಗಾರರಿಗೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆದಿಉಡುಪಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನವಾಗಿ 4 ಸುಸಜ್ಜಿತ ಗೋದಾಮುಗಳನ್ನು ನಿರ್ಮಿಸಲಾಗಿದೆ. ಈಗಾಗಲೆ ಮಾರುಕಟ್ಟೆ ಜಾಗದಲ್ಲಿ 30 ಗೋದಾಮುಗಳಿದ್ದು, ಎಲ್ಲವೂ ಬಳಕೆಯಲ್ಲಿವೆ. ಇಲ್ಲಿ ಹೆಚ್ಚುವರಿ ಗೋದಾಮುಗಳ ಬೇಡಿಕೆ ಇದ್ದ ಹಿನ್ನೆಲೆ ಯಲ್ಲಿ 86 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.

Advertisement

ಇಲಿಗಳ ಸಮಸ್ಯೆ ಇಲ್ಲ

ನಾಲ್ಕು ಗೋದಾಮುಗಳು 1,350 ಚದರ ಅಡಿ ಹೊಂದಿದ್ದು, 150 ಮೆಟ್ರಿಕ್‌ ಟನ್‌ ಸಾಮಥ್ಯ ಹೊಂದಿದೆ. ಮೇಲ್ಭಾಗದಲ್ಲಿ ಶೀಟ್ ಅಳವಡಿಸಲಾಗಿದೆ. ಇಲಿ, ಹೆಗ್ಗಣ, ಹಾವುಗಳು ಗೋದಾಮಿಗೆ ಬಾರದ ರೀತಿಯಲ್ಲಿ ಗೋದಾಮು ಸುತ್ತಲೂ ರ್ಯಾಟ್ ಪ್ರೂಫ್ ವ್ಯವಸ್ಥೆ ಮಾಡಲಾಗಿದೆ.

ವೈಜ್ಞಾನಿಕ ಗೋದಾಮು

ಎಪಿಎಂಸಿಯಲ್ಲಿ ಈಗಾಗಲೆ 30 ಗೋದಾಮುಗಳಿದ್ದು, ದಿನಸಿ ಪದಾರ್ಥಗಳು, ಹಣ್ಣು, ತರಕಾರಿ ಸಂಗ್ರಹಿಸಿ ಇಡಲು ಅನುಕೂಲವಾಗಿವೆ. ಒಂದು ತಿಂಗಳ ಹಿಂದೆ 1.10 ಕೋಟಿ ರೂ., ವೆಚ್ಚದಲ್ಲಿ ಹಣ್ಣು, ತರಕಾರಿ, ದಿನಸಿ ಪದಾರ್ಥಗಳು ಕೆಡದಂತೆ ವೈಜ್ಞಾನಿಕ ಗೋದಾಮು ಸಹ ನಿರ್ಮಿಸಲಾಗಿದೆ. 30 ಲಕ್ಷ ರೂ. ಮತ್ತು 13 ಲಕ್ಷ ರೂ., ವೆಚ್ಚದಲ್ಲಿ ಇತ್ತೀಚೆಗೆ ಮುಚ್ಚು ಹರಾಜು ಕಟ್ಟೆಯನ್ನು ನಿರ್ಮಿಸಲಾಗಿದೆ.

Advertisement

ಆದಾಯ ವೃದ್ಧಿ

ಎಪಿಎಂಸಿ ಮಾರುಕಟ್ಟೆಯಲ್ಲಿ ಶುಲ್ಕದಿಂದ ಬರುವ ಆದಾಯದಲ್ಲಿ ಸಾಕಷ್ಟು ಹೆಚ್ಚಳವಾಗಿದೆ. 2015ಕ್ಕಿಂತ ಮೊದಲು ಎಪಿಎಂಸಿ ಆದಾಯ 1 ಕೋಟಿ ರೂ., ಮೀರಿರಲಿಲ್ಲ. 2015ರ ಬಳಿಕ ವಾರ್ಷಿಕ 2.5 ಕೋಟಿ ರೂ. ಆದಾಯ ಎಪಿಎಂಸಿಗೆ ಬರುತ್ತಿದೆ. ಗೋದಾಮುಗಳ ಶುಲ್ಕ ಮಾಸಿಕ, ಮಾರುಕಟ್ಟೆ ವ್ಯಪಾರಸ್ಥರಿಂದ ಪ್ರತೀವಾರ ಶುಲ್ಕ ಸಂಗ್ರಹವಾಗುತ್ತದೆ.

ಮೂಲಸೌಲಭ್ಯದ ನಿರೀಕ್ಷೆ
ಎಪಿಎಂಸಿ ಅಭಿವೃದ್ಧಿ ಕಾರ್ಯಗಳು ಹಂತಹಂತವಾಗಿ ನಡೆಯಲಿದೆ. ಅಭಿವೃದ್ಧಿ ಕಾರ್ಯದ ಜತೆಗೆ ಕೆಲವು ಮೂಲ ಅವಶ್ಯಕತೆಗಳನ್ನು ನಗರಸಭೆ ಒದಗಿಸಬೇಕಾಗಿದೆ. ಎಪಿಎಂಸಿಯಿಂದ ನಗರಸಭೆಗೆ ವಾರ್ಷಿಕ 60 ರಿಂದ 70 ಸಾವಿರ ರೂ. ತೆರಿಗೆ ಪಾವತಿಸಲಾಗುತ್ತದೆ. ಇಲ್ಲಿಗೆ ಒಳಚರಂಡಿ ಸಹಿತ ಮೂಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ನಗರಸಭೆ ಕ್ರಮ ತೆಗೆದುಕೊಳ್ಳಬೇಕಿದೆ.

-ಕೆ.ಶ್ಯಾಮ ಪ್ರಸಾದ್‌ ಭಟ್, ಎಪಿಎಂಸಿ ಅಧ್ಯಕ್ಷ

ಸುಸಜ್ಜಿತ ಗೋದಾಮು
ಕೃಷಿ ಉತ್ಪನ್ನ ಮಾರಾಟಗಾರರಿಗೆ, ರೈತರಿಗೆ ಅನುಕೂಲವಾಗವ ನಿಟ್ಟಿನಲ್ಲಿ ಬೇಡಿಕೆ ಅನುಗುಣವಾಗಿ 4 ಸುಸಜ್ಜಿತ ಗೋದಾಮುಗಳನ್ನು ನಿರ್ಮಿಸಲಾಗಿದೆ. ಎಪಿಎಂಸಿ ವತಿಯಿಂದ ಮುಂದಿನ ಹಂತದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಸಮಿತಿ ನಿಧಿಯಿಂದ ನಡೆಯಲಿದೆ. ರೈತಭವನ, ವಾಣಿಜ್ಯ ಸಂಕೀರ್ಣ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ.

-ರಾಮಚಂದ್ರ ಕೆ.ನಾಯ್ಕ, ಎಪಿಎಂಸಿ ಸಹಾಯಕ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next