Advertisement

4 ತಿಂಗಳಾಯ್ತು: ಸದಸ್ಯರಿಗೆ ಸಿಕ್ಕಿಲ್ಲ ಸಂವಿಧಾನಾತ್ಮಕ ಅಧಿಕಾರ

12:30 AM Dec 29, 2018 | |

ಕೋಟ:  ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದು ಸದಸ್ಯರ ಆಯ್ಕೆಯಾಗಿ ಇದೀಗ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ.  ಆದರೆ ಮೀಸಲಾತಿ ಗೊಂದಲದಿಂದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಇನ್ನೂ ಆಯ್ಕೆ ನಡೆದಿಲ್ಲ.  ಹೀಗಾಗಿ ಆಯ್ಕೆಯಾದ ಸದಸ್ಯರಿಗೆ ಪೂರ್ಣಪ್ರಮಾಣದ ಸಂವಿಧಾನತ್ಮಕ ಅಧಿಕಾರ ದೊರೆತಿಲ್ಲ. ಸಾಲಿಗ್ರಾಮ ಪ.ಪಂ.ನಲ್ಲೂ ಕೂಡ ಇದೇ ರೀತಿ ಸಮಸ್ಯೆ ಇದ್ದು  ಆಡಳಿತ ನಿರ್ವಹಣೆಗೆ ಹಿನ್ನಡೆಯಾಗಿದೆ.

Advertisement

ನಾಲ್ಕು ತಿಂಗಳುಗಳು ಕಳೆಯಿತು 
ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆ.31ರಂದು ಚುನಾವಣೆ ನಡೆದು ಸೆ. 3ರಂದು ಫಲಿತಾಂಶ ಪ್ರಕಟಗೊಂಡಿತ್ತು. ಫಲಿತಾಂಶದ ಜತೆ-ಜತೆಗೆ ಅಧ್ಯಕ್ಷರ-ಉಪಾಧ್ಯಕ್ಷ ಮೀಸಲಾತಿ ಕೂಡ ಪ್ರಕಟವಾಗಿತ್ತು. ಆದರೆ ಮೀಸಲಾತಿ ಗೊಂದಲದಿಂದ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅಧ್ಯಕ್ಷರ ಆಯ್ಕೆಗೆ ಇದುವರೆಗೆ ನಡೆದಿಲ್ಲ.

ಆಯ್ಕೆಯಾದವರಿಗೆ ನಿರಾಸೆ  
ಪೂರ್ಣ ಅಧಿಕಾರವಿಲ್ಲವಾದ್ದರಿಂದ  ಸದಸ್ಯರಿಗೆ ತಮ್ಮ ವಾರ್ಡ್‌ಗಳ ಸಮಸ್ಯೆಯ ಕುರಿತು  ಅಧಿಕಾರವಾಣಿಯಲ್ಲಿ ಮಾತನಾಡಲು ಸಾಧ್ಯ ವಾಗುತ್ತಿಲ್ಲ ಹಾಗೂ ಸದಸ್ಯರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ವ್ಯವಸ್ಥೆ ಕೂಡ ಇಲ್ಲ. ಆಡಳಿತಾಧಿಕಾರಿಗಳಿಗೆ ಕಾರ್ಯದೊತ್ತಡವಿರು ವುದರಿಂದ ಅಪರೂಪಕ್ಕೆ ಪ.ಪಂ.ಗೆ ಭೇಟಿ ನೀಡುತ್ತಾರೆ. ಹೀಗಾಗಿ ಆಡಳಿತಾಧಿಕಾರಿಗಳಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸದಸ್ಯರಿಗೆ ಸಾಧ್ಯವಾಗುತ್ತಿಲ್ಲ.   ಒಟ್ಟಾರೆ  ಆಯ್ಕೆಯಾದ ಸದಸ್ಯ ರಿಗೆ ಅಧಿಕಾರವಿಲ್ಲದೆ ನಿರಾಸೆಯಾಗಿದೆ.

ಆಡಳಿತ ನಿರ್ವಹಣೆಗೆ ಹಿನ್ನಡೆ
ಈ ಹಿಂದೆ ಬಜೆಟ್‌ನಲ್ಲಿ  ರಸ್ತೆ, ಕುಡಿಯುವ ನೀರು ಮುಂತಾದ ಕಾಮಗಾರಿಗಳಿಗೆ ಟೆಂಡರ್‌ ಆಗಿದ್ದು ಅದನ್ನು ಸಂಪೂರ್ಣ ಅನುಷ್ಠಾನಗೊಳಿಸಲು ಇದುವರೆಗೆ ಸಾಧ್ಯವಾಗಿಲ್ಲ ಹಾಗೂ  ಹೊಸ ಯೋಜನೆಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕಸದ ಸಮಸ್ಯೆ ನಿವಾರಣೆಗೆ ಸ್ವಚ್ಛಾಸ್ತ್ರ  ಯೋಜನೆಯನ್ನು ಅಳವಡಿಸಿಕೊಳ್ಳುತ್ತಿದ್ದು ಇದರ ಬಗ್ಗೆ ನೇರವಾಗಿ ಸಲಹೆ ಸೂಚನೆಗಳನ್ನು ನೀಡಲು ಸದಸ್ಯರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದಸ್ಯರ ಆರಂಭಿಕ ವೇಗಕ್ಕೆ ಇದೀಗ ಸಂಪೂರ್ಣ ಹಿನ್ನಡೆಯಾಗಿದೆ.

ಅನೌಪಚಾರಿಕ ಸಭೆ ನಡೆಸಿ ಸಮಸ್ಯೆ ತಿಳಿಯಲಿ 
ನೋಟೀಸು ನೀಡಿ ಔಪಚಾರಿಕವಾಗಿ ಸದಸ್ಯರ ಸಭೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲದಿರಬಹುದು. ಆದರೆ ಆಡಳಿತಾಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳನ್ನು  ಯಾವ ರೀತಿ ಕೇಳುತ್ತಾರೆ ಅದೇ ರೀತಿ  ಪ.ಪಂ.ನ ಹೊರಗಡೆ  ಅನೌಪಚಾರಿಕವಾಗಿ ಸದಸ್ಯರ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಯಾವ ವಾರ್ಡ್‌ನಲ್ಲಿ ಎನು ಸಮಸ್ಯೆ ಇದೆ. ಯಾವ ಕೆಲಸ ಆಗುತ್ತಿಲ್ಲ. ಅಭಿವೃದ್ಧಿಯ ಕುರಿತು ಅಭಿಪ್ರಾಯಗಳನ್ನು  ಎನ್ನುವುದನ್ನು ಚರ್ಚೆ ಮಾಡಿ ಪರಿಹರಿಸುವ ಕೆಲಸವಾಗಬೇಕು ಎನ್ನುವುದು ಸದಸ್ಯರ ಬೇಡಿಕೆಯಾಗಿದೆ.

Advertisement

ಮತದಾರರಿಗೆ ಉತ್ತರ ನೀಡಲು ಆಗುತ್ತಿಲ್ಲ
ಆಯ್ಕೆಯಾಗಿ ನಾಲ್ಕು ತಿಂಗಳು ಕಳೆದರು ಸಂವಿದಾನಬದ್ಧ  ಅಧಿಕಾರ ಸಿಕ್ಕಿಲ್ಲ. ಹೀಗಾಗಿ ನಮ್ಮ ಯಾವುದೇ ಕೆಲಸಗಳು ಆಗುತ್ತಿಲ್ಲ. ನಮ್ಮ ಸಮಸ್ಯೆ ಮತದಾರರಿಗೆ ತಿಳಿಯುತ್ತಿಲ್ಲ. ಹೀಗಾಗಿ ಸದಸ್ಯರಿಂದ ಯಾವುದೇ ಕೆಲಸವಾಗುತ್ತಿಲ್ಲ ಎನ್ನುವ ಮನೋಭಾವನೆಯನ್ನು ಮತದಾರರಲ್ಲಿದೆ. ಕಾನೂನು ಹಾಗೂ ರಾಜಕೀಯ ವ್ಯವಸ್ಥೆಯ ನಡುವಿನ ಜಂಜಾಟ ಶೀಘ್ರ ಅಂತ್ಯಗೊಂಡು ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನಡೆಯಬೇಕು.
– ಶ್ರೀನಿವಾಸ್‌ ಅಮೀನ್‌, ಹಿರಿಯ ಸದಸ್ಯರು, ಪ.ಪಂ. ಸಾಲಿಗ್ರಾಮ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next