Advertisement

ಕೊಪ್ಪಳ : 4 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ

09:20 AM Sep 14, 2019 | mahesh |

ಕೊಪ್ಪಳ: ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರ ಸಮೀಪದ ಕಾಲಸಾ ಬಾಲ ಪಂಜಾಬ್ ಡಾಬಾದಲ್ಲಿ ಮಾದಕ ವಸ್ತುಗಳು ಇರುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ 4 ಲಕ್ಷ ರೂ. ಮೌಲ್ಯದ ವಸ್ತುಗಳ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Advertisement

ದಾಳಿಯಲ್ಲಿ 2 ಕೆ.ಜಿ ಓಪಿಯಂ ಮಾದಕ ಪುಡಿ, 3.6 ಕೆ.ಜಿ ಓಪಿಯಂ ಹಸ್ಕ್ (ಓಪಿಯಂ ಸಿಪ್ಪೆ), 40 ಗ್ರಾಂ ಓಪಿಯಂ ಪೇಸ್ಟ್, ಬೆಂಗಳೂರು ಮಾಲ್ಟ್ ವಿಸ್ಕಿಯ 180 ಎಂಎಲ್‌ನ 25 ಮದ್ಯ ತುಂಬಿದ ಟೆಟ್ರಾ ಪ್ಯಾಕ್,

ಬ್ಲೆಂಡರ್‍ಸ್ ಪ್ರೈಡ್ ವಿಸ್ಕಿಯ 750 ಎಂ.ಎಲ್‌ನ 1 ಮದ್ಯ ತುಂಬಿದ ಬಾಟಲಿ ಸೇರಿದಂತೆ ಒಂದು ಮಹೀಂದ್ರಾ ಜೈಲೊ ವಾಹನ ವಶಕ್ಕೆ ಪಡೆದಿದ್ದಾರೆ. ಈ ಮಾದಕ ವಸ್ತುಗಳ ಅಂದಾಜು ಮೌಲ್ಯ 4,14,600 ರೂ. ಆಗಿದ್ದು, ವಾಹನದ ಮೌಲ್ಯ 10 ಲಕ್ಷ ರೂ.ಗಳಾಗಿತ್ತದೆ. ಡಾಬಾದ ಮಾಲೀಕ ಕುಲವಿಂದರ್ ಸಿಂಗ್ ತಂ. ಅಚ್ಚರ್ ಸಿಂಗ್‌ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಪ್ಪಳ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಕುಷ್ಟಗಿ ವಲಯ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next