ಹೊಸದಿಲ್ಲಿ: ಮುಂಬರುವ 12 ತಿಂಗಳುಗಳ ಒಳಗೆ ಹೊಸ ವಾಹನವೊಂದನ್ನು ಖರೀದಿಸುವ ಇರಾದೆಯನ್ನು ದೇಶದ ಅನೇಕ ಮಂದಿ ಹೊಂದಿದ್ದಾರೆ ಎಂಬುದಾಗಿ “ಮೊಬಿಲಿಟಿ ಔಟ್‌ಲುಕ್’ ನಡೆಸಿದ ಸಮೀಕ್ಷೆಯೊಂದು ತಿಳಿಸಿದ್ದು, ವಾಹನ ಉತ್ಪಾದಕ, ವಿತರಕ ಸಂಸ್ಥೆಗಳಿಗೆ ಆಶಾವಾದ ಮೂಡಿಸಿದೆ.
2.7 ಲಕ್ಷ ಗ್ರಾಹಕರನ್ನು ಒಳಗೊಂಡ ಸಮೀಕ್ಷೆ ಇದಾಗಿದ್ದು, ಶೇ. 83 ಮಂದಿ ಮುಂದಿನ ಒಂದು ವರ್ಷದೊಳಗೆ ವಾಹನ ಖರೀದಿಸುವುದಾಗಿ ತಿಳಿಸಿದ್ದಾರೆ.
ಶೇ. 13 ಮಂದಿ “ಖರೀದಿಸಬಹುದು’ ಎಂದು ಉತ್ತರಿಸಿ ದ್ದರೆ ಶೇ. 4 ಮಂದಿ ಮಾತ್ರ ನಕಾರ ಸೂಚಿಸಿದ್ದಾರೆ. ವಾಹನ ಖರೀದಿಸಲು ಬಲವಾದ ಇರಾದೆಯು ಖರೀದಿಯ ಒಟ್ಟು ಹವ್ಯಾಸ ಉತ್ತಮವಾಗಿರುವುದರ ಸೂಚನೆ ಎಂದೂ ಸಮೀಕ್ಷೆ ಹೇಳಿದೆ.
ಶೇ. 52 ಮಂದಿ ಹೊಸ ಕಾರು ಖರೀದಿಸಬಯಸಿದ್ದರೆ ಶೇ. 33 ಮಂದಿ ಹೊಸ ದ್ವಿಚಕ್ರ ವಾಹನ ಖರೀದಿಸುವ ಇಚ್ಛೆ ಹೊಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಪಣಜಿ : ಆರು ಅಂಗಡಿಗಳು ಬೆಂಕಿಗಾಹುತಿ, ಲಕ್ಷ ರೂಪಾಯಿ ನಷ್ಟ