Advertisement

ಮೃತ ಹರಿಕೃಷ್ಣ ಜತೆ ಸೆಲ್ಫಿ: ನಾಲ್ವರು ಆಸ್ಪತ್ರೆ ಸಿಬಂದಿ ಅಮಾನತು

04:27 PM Sep 01, 2018 | udayavani editorial |

ಹೈದರಾಬಾದ್‌ : ಕಳೆದ ಆ.29ರಂದು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಎನ್‌ಟಿಆರ್‌ ಪುತ್ರ, ನಟ-ರಾಜಕಾರಣಿ ಹರಿಕೃಷ್ಣ ಅವರ ಮೃತ ದೇಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ತನ್ನ ನಾಲ್ವರು ಸಿಬಂದಿಗಳನ್ನು ಇಲ್ಲಿನ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಿಂದ ಅಮಾನತು ಮಾಡಿದೆ. 

Advertisement

ರೋಗಿಯ ಖಾಸಗಿತನದ ಉಲ್ಲಂಘನೆ ಮಾಡಿದ್ದ ಆರೋಪದ ಮೇಲೆ ನಾಲ್ವರು ಆಸ್ಪತ್ರೆ ಸಿಬಂದಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿ ಇಂದು ಶನಿವಾರ ತಿಳಿಸಿದ್ದಾರೆ. 

ಕೆಲವು ನರ್ಸ್‌ಗಳ ಸಹಿತ ಆಸ್ಪತ್ರೆ ಸಿಬಂದಿಗಳು ಹರಿಕೃಷ್ಣ ಅವರ ಮೃತದೇಹದೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದರು.

ಅವಿಭಜಿತ ಆಂಧ್ರ ಪ್ರದೇಶದ ಮೂರು ಬಾರಿಯ ಸಿಎಂ ಆಗಿದ್ದ ದಿ| ಎನ್‌ ಟಿ ರಾಮರಾವ್‌ ಅವರ ಪುತ್ರ ನಂದಮೂರಿ ಹರಿಕೃಷ್ಣ ಅವರು ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ಆ.29ರಂದು ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next