Advertisement
ಮೂಲಸೌಕರ್ಯ ಹಾಗೂ ಸಿಬಂದಿ ಕೊರತೆ ಸಹಿತವಾಗಿ ಹಲವು ಸಮಸ್ಯೆಗಳಿಂದ ನಲುಗಿ ಹೋಗಿದ್ದ ಐಟಿಐ ಕೇಂದ್ರಗಳಿಗೆ ನಿರ್ವಹಣೆ ಹಾಗೂ ಮುನ್ನಡೆಸಿಕೊಂಡು ಹೋಗುವ ಚಿಂತೆ ಬಹಳ ವರ್ಷಗಳಿಂದ ಕಾಡುತ್ತಿತ್ತು. ಈಗ ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ಹೊಸ ಉಪಕರಣಗಳು, ಆಧುನಿಕ ತಂತ್ರಜ್ಞಾನಗಳು ಐಟಿಐಗೆ ಹೊಸ ವಿನ್ಯಾಸ ನೀಡಲಿದೆ.
Related Articles
Advertisement
34 ಅಲ್ಪಾವಧಿ ಕೋರ್ಸ್, 6 ದೀರ್ಘಾವಧಿ ಕೋರ್ಸ್‌ಗಳನ್ನು ಇಲ್ಲಿ ಕಲಿಸಲಾಗುತ್ತದೆ. ಈಗಾಗಲೇ 18 ವಿದ್ಯಾರ್ಥಿಗಳು ಉಡುಪಿ ಅಲೆವೂರಿನ ಪ್ರಗತಿ ನಗರದಲ್ಲಿ ತಾಂತ್ರಿಕ ಶಿಕ್ಷಣ ಪಡೆಯುತ್ತಿದ್ದಾರೆ. ಟಾಟಾ ಸಂಸ್ಥೆಯಿಂದ ಒಂದು ಕಾಲೇಜಿಗೆ ಇಬ್ಬರು ನುರಿತ ಶಿಕ್ಷಕರನ್ನು ನೇಮಿಸುತ್ತಾರೆ. ಎರಡು ವರ್ಷ ಕಾಲಾವಧಿಯಲ್ಲಿ ಅವರು ಶಿಕ್ಷಕರಿಗೆ ಪಾಠ, ಐಟಿಐ ಕಾಲೇಜು ಉಪನ್ಯಾಸಕರಿಗೂ ಮಾರ್ಗದರ್ಶನ ನೀಡಿ ತರಬೇತುಗೊಳಿಸುತ್ತಾರೆ.
ಸುಸಜ್ಜಿತ ವರ್ಕ್‌ಶಾಪ್
ಜಿಲ್ಲೆಯಲ್ಲಿ 4 ಐಟಿಐಗಳಲ್ಲಿ ಟಾಟಾ ಸಂಸ್ಥೆ ಅತ್ಯಾಧುನಿಕ ವರ್ಕ್ ಶಾಪ್ ನಿರ್ಮಿಸಿದೆ. ಮೊದಲ ಬ್ಯಾಚ್ ಆರಂಭಗೊಂಡು ತರಬೇತಿ ನಡೆಯುತ್ತಿದೆ. ಎಸೆಸೆಲ್ಸಿ ಫಲಿತಾಂಶ ಬರುತ್ತಿದ್ದಂತೆ ಆಸಕ್ತ ವಿದ್ಯಾರ್ಥಿಗಳು ಆಯಾ ಐಟಿಐಗಳನ್ನು ಸಂಪರ್ಕಿಸಬಹುದು. – ಜಗದೀಶ್, ಸಹಾಯಕ ನಿರ್ದೇಶಕ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಉಡುಪಿ
ಅವಿನ್ ಶೆಟ್ಟಿ