Advertisement
ನಾಲ್ವರು ಸಣ್ಣ ಪ್ರಮಾಣದ ನಟಿಯರು ಮತ್ತು ಮಾಡೆಲ್ ಗಳಾದ ನಿಕಿತಾ ತಾಂಬೋಲಿ, ಚಾಹತ್ ಖನ್ನಾ, ಸೋಫಿಯಾ ಸಿಂಗ್ ಮತ್ತು ಅರುಷಾ ಪಾಟೀಲ್ ಅವರು ದೆಹಲಿ ಜೈಲಿನಲ್ಲಿದ್ದ ಸುಕೇಶ್ ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದಾರೆ ಎಂದು ಇಂಡಿಯಾ ಟುಡೇ ತಿಳಿಸಿದೆ.
Related Articles
Advertisement
ಬಿಗ್ ಬಾಸ್ ಖ್ಯಾತಿಯ ನಿಕಿತಾ ತಾಂಬೋಲಿ ಹೇಳಿಕೆಯ ಪ್ರಕಾರ, ಪಿಂಕಿ ಇರಾನಿ ಆರೋಪಿ ಸುಕೇಶ್ ಚಂದ್ರಶೇಖರ್ ಅವರನ್ನು ‘ಶೇಖರ್’ ಎಂದು ಪರಿಚಯಿಸಿದ್ದರು. ಸುಕೇಶ್ ಚಂದ್ರಶೇಖರ್ ನನ್ನು ದಕ್ಷಿಣ ಭಾರತದ ನಿರ್ಮಾಪಕ ಮತ್ತು ಸ್ನೇಹಿತ ಪಿಂಕಿ ಇರಾನಿ ಎಂದು ಪರಿಚಯಿಸಿದ್ದ.
ಇದನ್ನೂ ಓದಿ:ಹಠಾತ್ ಹೃದಯ ಸ್ತಂಭನ: ಪಾಕಿಸ್ಥಾನದ ಮಾಜಿ ಅಂಪೈರ್ ಅಸದ್ ರವುಫ್ ನಿಧನ
“ಎರಡು ಸಂದರ್ಭಗಳಲ್ಲಿ ನಿಕಿತಾ ತಾಂಬೋಲಿ ಆರೋಪಿ ಸುಕೇಶ್ ಚಂದ್ರಶೇಖರ್ ನನ್ನು ಭೇಟಿಯಾಗಿದ್ದರು ಎಂದು ಬಹಿರಂಗವಾಗಿದೆ. 2018ರ ಏಪ್ರಿಲ್‌ನಲ್ಲಿ ನಡೆದ ಮೊದಲ ಭೇಟಿಯ ವೇಳೆ ಆರೋಪಿ ಪಿಂಕಿ ಇರಾನಿ ಸುಕೇಶ್ ಚಂದ್ರಶೇಖರ್ ಅವರಿಂದ 10 ಲಕ್ಷ ರೂಪಾಯಿ ನಗದು ಪಡೆದಿದ್ದು, ಅದರಲ್ಲಿ ನಿಕಿತಾ ತಾಂಬೋಲಿಗೆ 1.5 ಲಕ್ಷ ರೂ. ನೀಡಿದ್ದ. ಎರಡನೆ ಬಾರಿ, ಅಂದರೆ ಮೊದಲ ಭೇಟಿಯ ಎರಡು ಮೂರು ವಾರಗಳ ನಂತರ, ಅವಳು ಸುಕೇಶ್ ಚಂದ್ರಶೇಖರ್ ಅವರನ್ನು ಭೇಟಿಯಾಗಲು ಒಬ್ಬಂಟಿಯಾಗಿ ಹೋಗಿದ್ದಳು. ಅಲ್ಲಿ ಆಕೆಗೆ ಎರಡು ಲಕ್ಷ ರೂಪಾಯಿ ನಗದು ಮತ್ತು ಒಂದು ಗುಚ್ಚಿ ಬ್ಯಾಗನ್ನು ಆರೋಪಿ ಸುಕೇಶ್ ಚಂದ್ರಶೇಖರ್ ನೀಡಿದ್ದಾನೆ. ಎರಡು ಬಾರಿಯೂ ತಿಹಾರ್ ಜೈಲಿನಲ್ಲಿಯೇ ಈ ಭೇಟಿ ನಡೆದಿದೆ ಎಂದು ಇಡಿ ಆರೋಪಪಟ್ಟಿಯಲ್ಲಿ ಹೇಳಿದೆ.