Advertisement

4 ಕೋಟಿ ರೂ.ವಂಚನೆ ಆರೋಪ: ದೂರು

07:08 PM Dec 20, 2020 | Suhan S |

ಕೆಜಿಎಫ್: ಕೆರೆ, ರಾಜಕಾಲುವೆ ಒತ್ತುವರಿ ಮೊದಲಾದ ಆರೋಪಗಳನ್ನು ಎದುರಿಸುತ್ತಿದ್ದ ಸಿಂಧೂ ನಗರ ಬಡಾವಣೆಯ ನಿರ್ಮಾಣದಲ್ಲಿ ಪಾಲುದಾರರಿಗೆ 4ಕೋಟಿ ರೂ.ಮೋಸ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಆಂಡರಸನ್‌ಪೇಟೆ ಪೊಲೀಸರು ಸಾಗಂ ರಿಯಾಲಿಟಿ ಪ್ರçವೇಟ್‌ ಲಿಮಿಟೆಡ್‌ ಮಾಲೀಕ ಕಿರಣ್‌ ಕುಮಾರ್‌ ರೆಡ್ಡಿ, ಅವರ ಸಂಬಂಧಿಗಳಾದ ಸುರೇಂದ್ರ ರೆಡ್ಡಿ, ವೆಂಕಟಗಾಯತ್ರಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

Advertisement

ನಗರದ ಮಸ್ಕಂ/ಗೌತಮನಗರದ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಸಿಂಧೂ ನಗರ ಬಡಾವಣೆ ನಿರ್ಮಾಣಮಾಡಲು4 ಕೋಟಿ ರೂ.ತೆಗೆದುಕೊಂಡು ನಂತರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವುದಾಗಿ ಹೇಳಿ 43 ಸೈಟ್‌ಗಳನ್ನು ನೀಡದೇ ಸಾಗಂ ರಿಯಾಲಿಟಿಪ್ರçವೇಟ್‌ ಲಿಮಿಟೆಡ್‌ ಮೋಸ ಮಾಡಿದೆ ಎಂದುಆರೋಪಿಸಿ ಚಾವಾ ಗುರುವಯ್ಯ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕೆಜಿಎಫ್ ನಗರದ ಮಸ್ಕಂನ ಸರ್ವೆ ನಂಬರ್‌  63 ರಲ್ಲಿ 5 ಎಕರೆ19 ಗುಂಟೆ ಜಮೀನನ್ನು ಭೂ ಪರಿವರ್ತನೆ ಮಾಡಲಾಗಿದೆ. ಅದರಲ್ಲಿ ಬಡಾವಣೆ ನಿರ್ಮಾಣ ಮಾಡುವುದಾಗಿ ಹೇಳಿದ್ದ ಆರೋಪಿಗಳು ನನ್ನಿಂದ ನಾಲ್ಕು ಕೋಟಿ ಪಡೆದಿದ್ದರು. ಹಣ ಪಡೆದ ಬದಲಿಗೆ 43 ಸೈಟ್‌ಗಳನ್ನು ನೀಡುವುದಾಗಿ ಹೇಳಿದ್ದರು. ಚೆಕ್‌ ನೀಡಿದ್ದರು: 2015ರ ಅಕ್ಟೋಬರ್‌ 17 ರಂದುಕರಾರುಪತ್ರ ಮಾಡಿಕೊಳ್ಳಲಾಯಿತು. ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸೈಟ್‌ಗಳನ್ನು ಅನುಮೋದನೆ ಮಾಡಿಸಿಕೊಂಡು 52,000 ಚದರ ಅಡಿ ಜಾಗ ನೀಡುವುದಾಗಿ ಹೇಳಿ, ಹಣ ಪಡೆದದ್ದಕ್ಕೆ ಚೆಕ್‌ಕೂಡ ನೀಡಿದ್ದರು.

ನಂತರ 2018 ಅ.25 ರಂದು ಸುರೇಂದ್ರ ರೆಡ್ಡಿ ಮತ್ತು ವೆಂಕಟಗಾಯತ್ರಿಯವರ ಅಕ್ಕನ ಮಗ ಕಿರಣ್‌ ಕುಮಾರ್‌ ರೆಡ್ಡಿ ನಿರ್ವಹಿಸುತ್ತಿರುವ ಸಾಗಂ ರಿಯಾಲಿಟಿ ಪ್ರೈವೇಟ್‌ ಲಿಮಿಟೆಡ್‌ಗೆ ಜಾಯಿಂಟ್‌ ವೆಂಚರ್‌ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಸೈಟ್‌ಗಳನ್ನು ನೀಡದೆ ಜೊತೆಗೆ ಹಣ ಕೂಡ ವಾಪಸ್‌ ನೀಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆಂಡರಸನ್‌ಪೇಟೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಸೆ.420 ಪ್ರಕರಣ ದಾಖಲುಮಾಡಿದ್ದಾರೆ.

ನ್ಯಾಯಾಲಯದಲ್ಲಿ ಪ್ರಕರಣ: ಈ ಮಧ್ಯೆ ಮಸ್ಕಂಗ್ರಾಮದ ಸರ್ವೆ ನಂಬರ್‌ 51, 55.1 ಮತ್ತು 63 ರ ಜಮೀನಿನಲ್ಲಿ ಬಡಾವಣೆಗಳನ್ನು ನಿರ್ಮಿಸುತ್ತಿದ್ದು, ಅದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆ ಬಂದಿದ್ದರಿಂದ ಮತ್ತು ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ನೋಂದಣಿ ಮಾಡಬಾರದು ಎಂದು ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರವು ಹಿರಿಯ ಉಪ ನೋಂದಣಾಧಿಕಾರಿಗಳಿಗೆ, ನಗರಸಭೆಗೆ ಮತ್ತು ಬೆಸ್ಕಾಂಗೆ ಪತ್ರ ಬರೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next