Advertisement

ಸೇಲಂ ಆಸ್ಪತ್ರೆಯಲ್ಲಿ ಕಳೆದ 14 ತಾಸುಗಳಲ್ಲಿ 4 ಶಿಶುಗಳ ಸಾವು

07:19 PM Sep 01, 2017 | Team Udayavani |

ಕೊಯಮುತ್ತೂರು : ಕಳೆದ 14 ತಾಸುಗಳ ಅವಧಿಯಲ್ಲಿ  ಇಲ್ಲಿಗೆ ಸಮೀಪದ ಸೇಲಂ ಸರಕಾರಿ ಆಸ್ಪತ್ರೆಯಲ್ಲಿ ನಾಲ್ಕು ಶಿಶುಗಳು ಮೃತಪಟ್ಟಿರುವುವುದಾಗಿ ಮೂಲಗಳು ತಿಳಿಸಿವೆ.

Advertisement

ಮೃತ ಶಿಶುಗಳು ಐದು ತಿಂಗಳಿಂದ ಐದು ವರ್ಷ ಪ್ರಾಯದೊಳಗಿನವರಾಗಿದ್ದಾರೆ. ನಿನ್ನೆ ಗುರುವಾರ ರಾತ್ರಿ ಜ್ವರದಿಂದ ಬಳಲುತ್ತಿದ್ದ ಎರಡು ವರ್ಷ ಪ್ರಾಯದ ಇಬ್ಬರು ಮಕ್ಕಳು ಅಸು ನೀಗಿದ್ದಾರೆ. ಈ ನತದೃಷ್ಟ ಮಕ್ಕಳು ಕಳೆದ ಐದು ದಿನಗಳಿಂದ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ವಿಲ್ಲುಪುರಂ ಜಿಲ್ಲೆಯ ಕಲ್ಲಕುರುಚಿಯ ಐದು ತಿಂಗಳ ಮಗು ಇಂದು ಮೃತಪಟ್ಟಿತು. ಅದೇ ರೀತಿ ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಹುಡುಗ ಕೂಡ ಮೃತಪಟ್ಟ. ಕೆಲ ದಿನಗಳ ಹಿಂದೆ ಕೊಯಮುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೆಲವರು ಡೆಂಗೀ ಜ್ವರದಿಂದ ಸಾವಪ್ಪಿರುವುದಾಗಿಯೂ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next