Advertisement

ಪಾಕ್‌ ಗುಂಡಿನ ದಾಳಿ:ಸಾಂಬಾ ಸೆಕ್ಟರ್‌ನಲ್ಲಿ 4 BSF ಯೋಧರು ಹುತಾತ್ಮ 

11:02 AM Jun 13, 2018 | Team Udayavani |

ಶ್ರೀನಗರ: ಪಾಕಿಸ್ಥಾನಿ ಪಡೆಗಳು ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದ್ದು, ಸಾಂಬಾ ಸೆಕ್ಟರ್‌ನಲ್ಲಿ  ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ನ ಸಹಾಯಕ ಕಮಾಂಡರ್‌ ಸೇರಿದಂತೆ ನಾಲ್ವರು ಯೋಧರು  ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

ಮಂಗಳವಾರ ರಾತ್ರಿ 10.30 ರ ವೇಳೆ ನಡೆದ ಭಾರೀ ದಾಳಿಯಲ್ಲಿ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಪಾಕ್‌ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ಬಿಎಸ್‌ಎಫ್ ಪಡೆಗಳು ನೀಡಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. 

ಅಂತರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಜಾರಿಗೆ ತರಲು ಉಭಯ ದೇಶಗಳ ಡಿಜಿಎಂಓಗಳ ನಡುವೆ ಜೂನ್‌ 4 ರಂದು ಒಪ್ಪಂದವಾದ ಬಳಿಕವೂ ನರಿ ಬುದ್ದಿ ಬಿಡದ ಪಾಕ್‌ ದಾಳಿ ಮುಂದುವರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next