Advertisement

‘ಬಾಹುಬಲಿ 2’ಪ್ರದರ್ಶನಕ್ಕೆ 9 ಸಾವಿರ ಪರದೆಗಳು ಸಿದ್ಧ !

12:34 PM Apr 26, 2017 | Karthik A |

ಬೆಂಗಳೂರು: ಸ್ಟಾರ್‌ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಬಾಹುಬಲಿ 2: ದಿ ಕನ್‌ಕ್ಲೂಷನ್‌’ ಚಿತ್ರ  ಶುಕ್ರವಾರ ವಿಶ್ವಾದ್ಯಂತ 9000 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದ್ದು, ಈ ಮೂಲಕ ಭಾರತದ ಅತಿ ದೊಡ್ಡ ಚಿತ್ರವಾಗಿ ಹೊರಹೊಮ್ಮಲಿದೆ. ‘ಕಟ್ಟಪ್ಪ’ ಸತ್ಯರಾಜ್‌ ಕ್ಷಮೆ ಕೋರಿದ ನಂತರ ತಿಳಿಯಾಗಿರುವ ಕರ್ನಾಟಕ ಸೇರಿದಂತೆ ದೇಶದ ದಾಖಲೆಯ 6,500 ಚಿತ್ರಮಂದಿರಗಳಲ್ಲಿ ಬಾಹುಧಿಬಲಿ ಎರಡನೇ ಭಾಗ ತೆರೆಕಾಣಲಿದೆ. ನಗರದ ಎಲ್ಲ ಚಿತ್ರಮಂದಿರಗಳಲ್ಲಿ ಬಹುತೇಕ ಸೀಟುಗಳು ಭರ್ತಿಯಾಗಿವೆ. ಆಂಧ್ರ, ತೆಲಂಗಾಣ, ಕೇರಳ ಮತ್ತು ತಮಿಳುನಾಡಲ್ಲೂ ಇದೇ ಪರಿಸ್ಥಿತಿ ಇದ್ದು, ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಆರಂಭವಾಗಲಿದೆ.

Advertisement

ಇದೇ ವೇಳೆ ಹಿಂದಿ, ತೆಲುಗು, ತಮಿಳು ಅವತರಣಿಕೆಯಲ್ಲಿ ಅಮೆರಿಕದ 1,100 ಚಿತ್ರಮಂದಿಧಿರಗಳಿಗೆ ‘ಬಾಹುಬಲಿ 2’ ಲಗ್ಗೆಯಿಡುತ್ತಿದ್ದು, ಅಮೆರಿಕದಲ್ಲಿ ಬೃಹತ್‌ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಹಾಗೇ ಕೆನಡಾದ 80 ಸ್ಥಳಗಳಲ್ಲಿನ 150 ಪರದೆಗಳಲ್ಲಿ ಚಿತ್ರ ತೆರೆ ಕಾಣುತ್ತಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಫಿಜಿಯಲ್ಲೂ ಬಾಹುಬಲಿ 2 ದರ್ಶನಕ್ಕೆ ಅಭಿಮಾನಿಗಳು ಕಾತರಾಗಿದ್ದು, ಮಲೇಷ್ಯಾದಲ್ಲಿ ತಮಿಳು ಅವತರಣಿಗೆ ದೊಡ್ಡಮಟ್ಟದಲ್ಲಿ ತೆರೆಕಾಣಲಿದೆ.

ಮುಂಬಯಿಯಲ್ಲಿ ಪ್ರೀಮಿಯರ್‌: ಶುಕ್ರವಾರ ವಿಶ್ವಾದ್ಯಂತ ಬಿಡುಗಡೆಗೆ ಮುನ್ನ ಮುಂಬಯಿಯಲ್ಲಿ ‘ಬಾಹುಬಲಿ 2’ ಚಿತ್ರದ ಪ್ರೀಮಿಯರ್‌ ಪ್ರದರ್ಶನವನ್ನು ನಿರ್ದೇಶಕ ರಾಜಮೌಳಿ ಹಮ್ಮಿಕೊಂಡಿದ್ದಾರೆ. ಅಮಿತಾಭ್‌ ಬಚ್ಚನ್‌, ಶಾರುಖ್‌ ಖಾನ್‌ ಸೇರಿದಂತೆ ಎಲ್ಲ ದಿಗ್ಗಜ ನಟರು, ಸ್ಟಾರ್‌ ನಿರ್ದೇಶಕರು, ಬಾಲಿವುಡ್‌ ಘಟಾನುಘಟಿಗಳು ಚಿತ್ರ ವೀಕ್ಷಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next