Advertisement

4 ಆರೋಪಿಗಳ ಬಿಡುಗಡೆ

06:15 AM Dec 20, 2018 | Team Udayavani |

ಲಕ್ನೋ: ಬುಲಂದ್‌ ಶಹರ್‌ ಗಲಭೆಗೆ ಸಂಬಂಧಿಸಿದಂತೆ ಅನುಮಾನದ ಮೇಲೆ ಬಂಧಿಸಲಾಗಿದ್ದ ಸಫ‌ುìದ್ದೀನ್‌, ಸಿಜಿದ್‌ ಅಲಿ, ಬನ್ನೆ ಖಾನ್‌ ಹಾಗೂ ಆಸಿಫ್ ಅವರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ತಿಳಿಸಿದೆ. ಇವರ ವಿರುದ್ಧದ ಆಪಾದನೆಗಳನ್ನು ಸಾಬೀತುಪಡಿಸುವಂಥ ಸಾಕ್ಷಿಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವುಗಳನ್ನು ಹತ್ಯೆಗೈದ ಆರೋಪದ ಮೇರೆಗೆ ನದೀಮ್‌, ರಯೀಸ್‌ ಹಾಗೂ ಕಾಲಾ ಎಂಬುವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next