Advertisement

ಕಳೆದ ವಿತ್ತ ವರ್ಷದಲ್ಲಿ 4.7 ಕೋಟಿ ಉದ್ಯೋಗಗಳು ಸೃಷ್ಟಿ: ಆರ್‌ಬಿಐ

11:27 PM Jul 09, 2024 | |

ಮುಂಬಯಿ: 2023-24ನೇ ಹಣಕಾಸು ವರ್ಷದಲ್ಲಿ ಭಾರತದಲ್ಲಿ 4.7 ಕೋಟಿ ಉದ್ಯೋಗ ಸೃಷ್ಟಿಯಾಗಿದ್ದು, ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ 27 ಕ್ಷೇತ್ರಗಳಲ್ಲಿರುವ ಉದ್ಯೋಗಿಗಳ ಸಂಖ್ಯೆ 64.33 ಕೋಟಿಗೆ ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ತಿಳಿಸಿದೆ. 2023ರ ಮಾರ್ಚ್‌ ಅಂತ್ಯದಲ್ಲಿ ಉದ್ಯೋಗಿಗಳ ಸಂಖ್ಯೆ 59.67 ಕೋಟಿಗಳಾಗಿತ್ತು.  ಅಲ್ಲದೇ, 2023-24ರಲ್ಲಿ ಉದ್ಯೋಗದಲ್ಲಿನ ವಾರ್ಷಿಕ ಪ್ರಗತಿಯು ಶೇ.6ರಷ್ಟಾಗಿದ್ದರೆ, ವರ್ಷದ ಹಿಂದೆ ಈ ಪ್ರಮಾಣ ಶೇ.3.2ಆಗಿತ್ತು. ಇನ್ನು ಉದ್ಯೋಗಿಗಳ ಸಂಖ್ಯೆ ಕೂಡ ಕಳೆದ 5 ವರ್ಷಗಳಲ್ಲಿ ಹೆಚ್ಚಳವಾಗಿದೆ ಎಂದು ಆರ್‌ಬಿಐ ತಿಳಿಸಿದೆ.

Advertisement

ನಿರುದ್ಯೋಗ ಹೆಚ್ಚಳ: ಸರಕಾರಕ್ಕೆ ಖರ್ಗೆ ಚಾಟಿ

“ಯುವ ಜನತೆಯನ್ನು ನಿರುದ್ಯೋಗಿಗಳನ್ನಾಗಿ ಇರಿಸುವುದೇ ಮೋದಿ ಸರಕಾರದ ಧ್ಯೇಯ’ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ನಿರುದ್ಯೋಗ ಹೆಚ್ಚಳ  ಬಗ್ಗೆ ಈಗ ಸರಕಾರಿ ದತ್ತಾಂಶಗಳೇ ಇದನ್ನು ಬಹಿರಂಗ ಪಡಿಸಿವೆ ಇಪಿಎಫ್ಒ ಪ್ರಕಾರವೂ  2023ರಲ್ಲಿ ಶೇ.10 ಉದ್ಯೋಗ ಇಳಿಕೆಯಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next