Advertisement
ಪಟ್ಟಣದ ಪುರಸಭೆ ಮುಂಭಾಗದಲ್ಲಿಏರ್ಪಡಿಸಿದ್ದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಈಗಾಗಲೇ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿಗಾಗಿ 65 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ. ಪಟ್ಟಣದಲ್ಲಿ ಕಳೆದ ಮೂವತ್ತ ವರ್ಷಗಳ ಹಿಂದೆ ಒಳಚರಂಡಿ ನಿರ್ಮಿಸಿತ್ತಾದರೂ ಸಹ ಬಹಳ ವರ್ಷಗಳಾಗಿರುವದರಿಂದ ಬಹಳಷ್ಟು ಕಡೆ ದುರಸ್ತಿಗೊಳಿಸಬೇಕಿದೆ.
Related Articles
Advertisement
ನಾಮಫಲಕ ಹಾಕಿಸಿಕೊಳ್ಳುವ ಚಟ ಇಲ್ಲ: ಜೆಡಿಎಸ್ ಪಕ್ಷ ಜಿಲ್ಲೆ ಮತ್ತು ತಾಲೂಕಿಗೆ ಮಾಡಿರುವ ಕಾಮಗಾರಿ ಬಗ್ಗೆ ಸಾಲುಸಾಲಾಗಿ ತಿಳಿಸಿ ನಾವು ಮಾಡಿರುವ ಅಭಿವೃದ್ಧಿಗಳಿಗೆ ನಮ್ಮಗಳ ನಾಮಫಲಕ ಹಾಕಿದ್ದೇ ಆದಲ್ಲಿ ಜಿಲ್ಲೆಯಲ್ಲಿ ಬೇರೆಯವರು ನಾಮಫಲಕ ಹಾಕಲು ಸ್ಥಳವೇ ದೊರೆಯಲ್ಲ. ನಾಮಫಲಕ ಹಾಕಿಸಿಕೊಳ್ಳುವ ಚಟ ನಮ್ಮ ಕುಟುಂಬಕ್ಕೆ ಇಲ್ಲ ಎಂದು ತಿಳಿಸಿ, ನಮ್ಮನ್ನು ಟೀಕಿಸುವವರು ಆರ್ಥ ಮಾಡಿಕೊಳ್ಳಬೇಕು. ಜೊತೆಗೆ ನಾವು ಮಾಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಿನ ದಿನಗಳಲ್ಲಿ ಸುಣ್ಣಬಣ್ಣ ಮಾಡಿಸಲು ಸಹ ಕಷ್ಟವಾಗಲಿದೆ ಎಂದು ಭವಾನಿ ರೇವಣ್ಣ ಪರೋಕ್ಷವಾಗಿ ಸರ್ಕಾರಕ್ಕೆ ಟಾಂಗ್ ಕೊಟ್ಟರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಸುಧಾನಳಿನಿ ಅವರು ಮಾತನಾಡಿ, ಪುರಸಭೆಯಲ್ಲಿ ಅನೇಕ ಕಾಮಗಾರಿ ಮಾಡಿಸಬೇಕಿದ್ದು ಅದಕ್ಕೆ ತಾವು ಸರ್ಕಾರದಿಂದ ಅನುಧಾನ ತಂದುಕೊಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ತ್ರೀಲೋಚನಾ, ಮುಖ್ಯಾಧಿಕಾರಿ ಶಾಂತಲಾ ಹಾಗೂ ಪುರಸಭೆ ಸದಸ್ಯರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಆರು ಡಯಾಲಿಸಿಸ್ ಯಂತ್ರ ಅಳವಡಿಕೆ: ಭವಾನಿ ರೇವಣ್ಣನಾವುಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಳವಡಿ ಸಿರುವ ಯಂತ್ರಗಳು ಜಿಲ್ಲೆಯಲ್ಲಿ ಯಾವ ಆಸ್ಪತ್ರೆಯಲ್ಲೂ ಇಲ್ಲ ಎಂದು ಉದಾಹರಣೆ ನೀಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಆಳವಡಿಸಿರುವ ಸಿಟಿ ಸ್ಕ್ಯಾನಿಂಗ್ ಜಿಲ್ಲೆಯ ಯಾವೊಂದು ಸರ್ಕಾರಿ ಆಸ್ಪತ್ರೆಯಲ್ಲೂ ಇಲ್ಲ. ಇಂತಹ ಸವಲತ್ತು ತಂದಿರುವುದು ಕೇವಲ ಜೆಡಿಎಸ್‌ನವರಿಗಾಗಿ ಆಲ್ಲ, ಇನ್ನು ಡಯಾಲಿಸಿಸ್ ಗಾಗಿ ಈಗಾಗಲೇ ಅರು ಯಂತ್ರಗಳನ್ನು ಆಳವಡಿಸಿದ್ದು ನಿತ್ಯ ಹತ್ತಾರು ಮಂದಿ ಡಯಾಲಿಸಿಸ್ ಒಳಗಾಗಿ ತಮ್ಮ ಅರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಹೇಳಿದರು.