Advertisement

Marriage: 23 ದಿನಗಳ ಮದುವೆಯಲ್ಲಿ 4.35 ಲಕ್ಷ ಕೋಟಿ ವಹಿವಾಟು

09:38 PM Oct 17, 2023 | Team Udayavani |

ನವದೆಹಲಿ: ಈ ವರ್ಷದ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಸಾಲು ಸಾಲು ಮದುವೆಗಳು ನಿಗದಿಯಾಗಿವೆ. ಅಖೀಲ ಭಾರತ ವ್ಯಾಪಾರಿಗಳ ಒಕ್ಕೂಟದ ಸರ್ವೆ ಪ್ರಕಾರ, ನ.23ರಿಂದ ಡಿ.15ರವರೆಗೆ ದೇಶಾದ್ಯಂತ ಅಂದಾಜು 35 ಲಕ್ಷಕ್ಕೂ ಅಧಿಕ ಮದುವೆಗಳು ನಡೆಯಲಿವೆ. ಈ 23 ದಿನಗಳ ಅವಧಿಯಲ್ಲಿ ಮದುವೆ ಸಂಬಂಧಿತ ಖರೀದಿ ಮತ್ತು ಸೇವೆಗಳಿಂದ ಒಟ್ಟು 4.35 ಲಕ್ಷ ಕೋಟಿ ರೂ. ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ.

Advertisement

ಈ ಅವಧಿಯಲ್ಲಿ ನವದೆಹಲಿಯಲ್ಲೇ ಮೂರೂವರೆ ಲಕ್ಷಕ್ಕೂ ಅಧಿಕ ವಿವಾಹಗಳು ನಿಗದಿಯಾಗಿವೆ. ಇದರಿಂದ 1 ಲಕ್ಷ ಕೋಟಿ ರೂ. ವಹಿವಾಟು ನಡೆಯುವ ಅಂದಾಜಿದೆ.
ಕಳೆದ ವರ್ಷ ಈ ಅವಧಿಯಲ್ಲಿ ದೇಶದಲ್ಲಿ 32 ಲಕ್ಷ ವಿವಾಹಗಳು ಏರ್ಪಟ್ಟಿದ್ದವು. ಮದುವೆ ಸಂಬಂಧಿತ ಖರೀದಿ ಮತ್ತು ಸೇವೆಗಳಿಂದ 3.75 ಲಕ್ಷ ಕೋಟಿ ರೂ. ವಹಿವಾಟು ನಡೆದಿದ್ದವು.

 

Advertisement

Udayavani is now on Telegram. Click here to join our channel and stay updated with the latest news.

Next