Advertisement

ಗುಜರಾತಿನ ರಾಜ್‌ ಕೋಟ್‌ ನಲ್ಲಿ ಕಂಪಿಸಿದ ಭೂಮಿ: ಆತಂಕದಲ್ಲಿ ಜನ

05:10 PM Feb 26, 2023 | Team Udayavani |

ಗಾಂಧಿನಗರ್:‌ ಗುಜರಾತಿನ ರಾಜ್‌ ಕೋಟ್‌ ನಲ್ಲಿ ಭಾನುವಾರ (ಫೆ.26 ರಂದು) 4.3 ತೀವ್ರತೆಯ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಏಕಾಏಕಿ ಭೂಮಿ ಕಂಪಿಸಿದ್ದರಿಂದ ಜನ ಭೀತಿಯಲ್ಲಿದ್ದಾರೆ.

Advertisement

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಪ್ರಕಾರ ಭಾನುವಾರ ಮಧ್ಯಾಹ್ನ 3:21ರ ಸುಮಾರಿಗೆ 10 ಕಿ.ಮೀ ಆಳದಲ್ಲಿ ಭೂ ಕಂಪನ ಸಂಭವಿಸಿದೆ. ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪನ ಆದ ಬಳಿಕ ಅನೇಕ ಕಡೆ ಭೂಮಿ ಕಂಪಿಸಿದ್ದು, ಜನ ಭೀತಿಯಲ್ಲಿದ್ದಾರೆ. ಭಾನುವಾರ ಪಪುವಾ ನ್ಯೂಗಿನಿದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದಲ್ಲದೇ ಅಫ್ಘಾನಿಸ್ತಾನ ಹಾಗೂ ಜಪಾನ್‌ ನಲ್ಲೂ ಭೂಮಿ ಕಂಪಿಸಿದ ಕುರಿತು ವರದಿ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next