Advertisement

ರಾಜ್ಯಕ್ಕೆ ಕೇಂದ್ರದಿಂದ 4.25 ಲಕ್ಷ ಡೋಸ್‌ ರೆಮಿಡಿಸಿವರ್‌ ಹಂಚಿಕೆ: ಡಿಸಿಎಂ ಅಶ್ವತ್ಥನಾರಾಯಣ

10:13 PM May 16, 2021 | Team Udayavani |

ಬೆಂಗಳೂರು: ರೆಮಿಡಿಸಿವಿರ್‌ ಇಂಜೆಕ್ಷನ್ ಕೊರತೆ ಬಹುತೇಕ ನೀಗುತ್ತಿದ್ದು, ರಾಜ್ಯಕ್ಕೆ ಮುಂದಿನ ಒಂದು ವಾರಕ್ಕೆ ಅಗತ್ಯವಾದ 4.25 ಲಕ್ಷ ಡೋಸ್‌ ಹಂಚಿಕೆಯಾಗಿದೆ ಎಂದು ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಈ ಬಗ್ಗೆ ಭಾನುವಾರ ಹೇಳಿಕೆ ನೀಡಿರುವ ಅವರು, “ಮೇ 23ರವರೆಗೆ ಆಗುವಷ್ಟು ರೆಮಿಡಿಸಿವಿರ್‌ ರಾಜ್ಯಕ್ಕೆ ಲಭ್ಯವಾಗಿದೆ. ಇಡೀ ದೇಶದಲ್ಲೇ ಅತಿಹೆಚ್ಚು ರೆಮಿಡಿಸಿವರ್‌ ನಮ್ಮ ರಾಜ್ಯಕ್ಕೇ  ಹಂಚಿಕೆಯಾಗಿದೆ” ಎಂದಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೇ ಈ ಮಾಹಿತಿ‌ ನೀಡಿದ್ದು ಇದಕ್ಕೆ ಕೇಂದ್ರ ಸರ್ಕಾರವನ್ನು‌ ಅಭಿನಂದಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ :ಕೊಪ್ಪಳದಲ್ಲಿ 5 ದಿನ ಸಂಪೂರ್ಣ ಲಾಕ್‌ಡೌನ್ : ಹಳ್ಳಿಗಳಲ್ಲಿ ಡಂಗೂರ ಸಾರಿ ಜಾಗೃತಿ

Advertisement

Udayavani is now on Telegram. Click here to join our channel and stay updated with the latest news.

Next