Advertisement

4.18 ಲಕ್ಷ ಬೋಗಸ್‌ ಪಿಂಚಣಿ ಪ್ರಕರಣ ಪತ್ತೆ

03:59 PM Feb 02, 2021 | Team Udayavani |

ವಿಧಾನಸಭೆ: ಪಿಂಚಣಿ ವ್ಯವಸ್ಥೆ ಸರಿದಾರಿಗೆ ತರುವ ಸಲುವಾಗಿಯೇ ಆಧಾರ್‌ ಲಿಂಕ್‌ ಮಾಡಲು ತೀರ್ಮಾನಿಸಿದ್ದು, 4.18 ಲಕ್ಷ ಬೋಗಸ್‌ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸರ್ಕಾರಕ್ಕೆ 504 ಕೋಟಿ ರೂ. ಉಳಿತಾಯವಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

Advertisement

ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರಾಜೇಶ್‌ ನಾಯಕ್‌ ಪ್ರಶ್ನೆಗೆ ಉತ್ತರಿಸಿ, ಎಷ್ಟೋ ಕಡೆ ಮೃತಪಟ್ಟವರಿಗೂ ಪಿಂಚಣಿ ಹೋಗುತ್ತಿತ್ತು. ಒಬ್ಬರೇ ಮೂರು ಕಡೆ ಪಿಂಚಣಿ ಪಡೆಯುತ್ತಿದ್ದ ಪ್ರಕರಣಗಳು ಪತ್ತೆಯಾಗಿವೆ ಇದಕ್ಕೆಲ್ಲ ಇತಿಶ್ರೀ ಹಾಡುವ  ಸಲುವಾಗಿ ಆಧಾರ್‌ ಲಿಂಕ್‌ ಮಾಡಿ ಮನೆ ಬಾಗಿಲಿಗೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಕಲ್ಲು ಕ್ವಾರಿಗೆ ನಾಡಕಚೇರಿ ಸಿಬ್ದಂದಿ ಭೇಟಿ

ಪಿಂಚಣಿ ಪಡೆಯಲು ಅರ್ಹತೆ ಹೊಂದಿರುವವರು ಸಾಕಷ್ಟು ಇದ್ದು ಅವರನ್ನು ಗುರುತಿಸಿ ಪಿಂಚಣಿ ತಲುಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಕಾರಣ ಪಿಂಚಣಿ ಪಾವತಿ ವ್ಯತ್ಯಯವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳೊಂದಿಗೆ ಸಮನ್ವಯತೆ ಸಾಧಿಸಿ ಬದಲಾವಣೆಯಾದ ಖಾತೆ ಮಾಹಿತಿ ಸಂಗ್ರಹಿಸಿ ತಂತ್ರಾಂಶದಲ್ಲಿ ಅಳವಡಿಸಿ ಪಿಂಚಣಿ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next