Advertisement

3ನೇ ಅಲೆ ಮುನ್ನೆಚ್ಚರಿಕೆ: ಸಿಎಂ ಸಭೆ

03:29 PM Jun 02, 2021 | Team Udayavani |

ಬೆಂಗಳೂರು:ರಾಜ್ಯದಲ್ಲಿ ಕೊರೊನಾಎರಡನೇ ಅಲೆ ಕುರಿತು ನಿರ್ಲಕ್ಷ್ಯ ವಹಿಸಿದ ಪರಿಣಾಮ ಉಂಟಾದ ಸಮಸ್ಯೆ ಹಿನ್ನೆಲೆಯಲ್ಲಿ ಮೂರನೇ ಅಲೆಎದುರಿಸುವ ಸಂಬಂಧ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲುಸರ್ಕಾರ ಮುಂದಾಗಿದೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಅವರ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರಕೊರೊನಾ ಮೂರನೇ ಅಲೆ ತಡೆಗಟ್ಟುವಕುರಿತುರಚಿಸಲಾಗಿರುವ ಉನ್ನತ ಮಟ್ಟದ ವೈದ್ಯರುಹಾಗೂ ಪರಿಣಿತರ ಜತೆ ಸಭೆ ನಡೆಸಲಿದ್ದಾರೆ.ರಾಜ್ಯದಲ್ಲಿ 3ನೇ ಅಲೆ ಸೆಪ್ಟೆಂಬರ್‌ ವೇಳೆಗೆಬರುವ ಸಾಧ್ಯತೆ ಇರುವ ಬಗ್ಗೆ ಪರಿಣಿತರ ವರದಿಆಧಾರದ ಮೇಲೆ ಯಾವ ಕ್ರಮ ಕೈಗೊಳ್ಳಬೇಕು.ಹಾಗೂ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿಮೂಲ ಸೌಕರ್ಯ ಕಲ್ಪಿಸುವುದು,

3ನೇ ಅಲೆಮಕ್ಕಳ ಮೇಲೆ ಪರಿಣಾಮಬೀರಬಹುದು ಎಂಬ ಶಿಫಾರಸುಮೇರೆಗೆ ಸರ್ಕಾರ ಯಾವ ರೀತಿಯಎಚ್ಚರಿಕೆವಹಿಸಬೇಕು ಎಂಬುದರಬಗ್ಗೆಸಭೆಯಲ್ಲಿ ಚರ್ಚಿಸಿ ತೀರ್ಮಾನಕೈಗೊಳ್ಳುವ ಸಾಧ್ಯತೆಯಿದೆ.ನಾಳೆ ತೀರ್ಮಾನ?: ಈ ಮಧ್ಯೆ,ಕೊರೊನಾ ನಿಯಂತ್ರಣ ವಿಚಾರದಲ್ಲಿ ರಾಜ್ಯದಲ್ಲಿಜಾರಿಗೊಳಿಸಿರುವ ಲಾಕ್‌ ಡೌನ್‌ ಜೂ.7 ಕ್ಕೆಅಂತ್ಯವಾಗಲಿದ್ದು, ಆ ನಂತರದ ತೀರ್ಮಾನಕುರಿತು ಏನು ಮಾಡಬೇಕು ಎಂಬ ಬಗ್ಗೆಯೂ ಚರ್ಚಿಸಿ ಪರಿಣಿತರ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಬುಧವಾರಅಥವಾ ಗುರುವಾರ ಇದರ ಬಗ್ಗೆ ಸಂಪುಟದಸದಸ್ಯರ ಜತೆ ಚರ್ಚಿಸಿ ಅಥವಾ ಸಂಪುಟಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next