Advertisement

3 ನೇ ಮದ್ವೆ!;ಬಿಗರೂಟದ ವೇಳೆ ವರನಿಗೆ ಗೂಸಾ 

02:35 PM Nov 18, 2017 | Team Udayavani |

ಹಾಸನ : ಇಲ್ಲಿನ ಗೊರುರಿನಲ್ಲಿ ಇಬ್ಬರು ಮಹಿಳೆಯರಿಗೆ ವಂಚಿಸಿ ಮೂರನೇಯ ವಿವಾಹದ ಸಂಭ್ರಮದಲ್ಲಿದ್ದ ಭೂಪನೊಬ್ಬನಿಗೆ ಮೊದಲ ಹೆಂಡತಿ ಮತ್ತುಸಂಬಂಧಿಕರು ಹಿಗ್ಗಾಮುಗ್ಗಾ ಗೂಸಾ ನೀಡಿ ಮದುವೆ ಹುಚ್ಚು ಬಿಡಿಸಿದ ಘಟನೆ ನಡೆದಿದೆ.

Advertisement

ರಾಜೇಶ್‌ ಎಂಬಾತ ಥಳಿತಕ್ಕೊಳಗಾಗಿದ್ದು, ಈಗಾಗಲೇ 2 ಮದುವೆಯಾಗಿದ್ದು, ಮೊದಲ ಹೆಂಡತಿಗೆ ಇಬ್ಬರು ಮಕ್ಕಳಿದ್ದಾರೆ, 2 ನೇ ಹೆಂಡತಿಗೂ ಹಿಂಸೆ ನೀಡಿ  ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿ ಮೂರನೇ ಮದುವೆಯ ಬೀಗರೂಟದ ಸಂಭ್ರಮದಲ್ಲಿದ್ದ. 

2005 ರಲ್ಲಿ ಚನ್ನರಾಯಪಟ್ಟಣದ ಸೌಮ್ಯ ಅವರನ್ನು ವಿವಾಹವಾಗಿ  6 ವರ್ಷಗಳ ಕಾಲ ಸಂಸಾರ ನಡೆಸಿ ಇಬ್ಬರು ಮಕ್ಕಳನ್ನು ಕರುಣಿಸಿದ್ದ.  ಆ ಬಳಿಕ ಕಲಾ ಎಂಬಾಕೆಯನ್ನು ವಿವಾಹವಾಗಿ 10 ತಿಂಗಳು ಸಂಸಾರ ನಡೆಸಿದ್ದ. ಇದೀಗ 3 ನೇ ಮದುವೆಯಾಗಿ ಸಂಬಂಧಿಕರಿಗೆ ಬೀಗರೂಟ ಹಾಕುತ್ತಿದ್ದ. ಈ ವೇಳೆ ಮನೆಯ ಮಹಡಿಯ ಮೇಲೆ ರಣರಂಗ ನಿರ್ಮಾಣವಾಗಿದೆ.

ಸ್ಥಳಕ್ಕಾಗಮಿಸಿದ ಗೋರೂರು ಪೊಲೀಸರು ರಾಜೇಶ್‌ನನ್ನು ವಶಕ್ಕೆ ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next