Advertisement

ಅಪಹೃತ 39 ಭಾರತೀಯರು ಇರಾಕ್‌ ಜೈಲಿನಲ್ಲಿ: ಸುಷ್ಮಾ

04:20 AM Jul 17, 2017 | Team Udayavani |

ಹೊಸದಿಲ್ಲಿ: ಮೂರು ವರ್ಷಗಳ ಹಿಂದೆ ಇರಾಕ್‌ನಲ್ಲಿ ಐಸಿಸ್‌ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ 39 ಭಾರತೀಯ ಪ್ರಜೆಗಳನ್ನು ವಾಯವ್ಯ ಮೊಸೂಲ್‌ನ ಬದುಶ್‌ ಜೈಲಿನಲ್ಲಿ ಇರಿಸಿರುವ ಸಾಧ್ಯತೆಯಿದ್ದು, ಜುಲೈ 24ರಂದು ಭಾರತಕ್ಕೆ ಬರಲಿರುವ ಇರಾಕ್‌ ವಿದೇಶಾಂಗ ಸಚಿವರು ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

Advertisement

ಬಹುತೇಕ ಪಂಜಾಬ್‌ಗ ಸೇರಿದವರು ಎನ್ನಲಾದ, ಅಪಹೃತರ ಕುಟುಂಬಗಳ ಸದಸ್ಯರನ್ನು ರವಿವಾರ ಭೇಟಿ ಮಾಡಿದ ಸಚಿವೆ ಸುಷ್ಮಾ ಸ್ವರಾಜ್‌, ಅಪಹರಣ ಕ್ಕೊಳಗಾದವರನ್ನು ಸ್ವದೇಶಕ್ಕೆ ಕರೆತರುವ ಎಲ್ಲ ಪ್ರಯತ್ನವನ್ನು ಸರಕಾರ ಮಾಡುತ್ತಿದೆ ಎಂದು ಭರವಸೆ ನೀಡಿದ್ದಾರೆ. ಜತೆಗೆ, ಮೊಸೂಲ್‌ ಪ್ರಾಂತ್ಯವು ಉಗ್ರರ ಹಿಡಿತದಿಂದ ಸ್ವತಂತ್ರಗೊಂಡ ನಂತರ ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್‌ ಅವರು ಅಪಹೃತರ ಬಗ್ಗೆ ಕಲೆ ಹಾಕಿರುವ ಮಾಹಿತಿಯನ್ನು ಕುಟುಂಬದ  ಮುಂದಿಟ್ಟರು. ‘ಭಾರತೀಯರನ್ನು ಬದುಶ್‌ ಜೈಲಿನಲ್ಲಿರಿಸಿರುವ ಬಗ್ಗೆ ಗುಪ್ತ ಚರ ಮೂಲಗಳಿಂದ ಮಾಹಿತಿ ದೊರೆತಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next