Advertisement

ವಿವಿಧ ರೈಲು ದುರ್ಘ‌ಟನೆಗಳಿಗೆ ಒಂದು ವರ್ಷದಲ್ಲಿ 3,800 ಬಲಿ !

11:58 AM Oct 01, 2017 | Team Udayavani |

ಮುಂಬಯಿ: ಸರಕಾರ ಬುಲೆಟ್‌ ರೈಲು ಓಡಿಸಲು ಸಿದ್ಧತೆ ನಡೆಸುತ್ತಿದೆ. ಆದರೆ, ಮುಂಬಯಿಯ ಉಪನಗರ ಲೋಕಲ್‌ ರೈಲುಗಳಿಂದ ಬಿದ್ದು ಹಾಗೂ ರೈಲು ಹಳಿ ದಾಟುವ ಸಮಯದಲ್ಲಿ ದೈನಂದಿನ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ.

Advertisement

ವಿವಿಧ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಮುಂಬಯಿ ಉಪನಗರ ರೈಲು ಜಾಲದಲ್ಲಿ ಸಂಭವಿಸಿದ ವಿವಿಧ ದುರ್ಘ‌ಟನೆಗಳಿಗೆ 3,800 ಮಂದಿಯ ಸಾವು ಸಂಭವಿಸಿದೆ.

ಕಳೆದ 8 ತಿಂಗಳಲ್ಲಿ  ಚಲಿಸುತ್ತಿರುವ ರೈಲಿನಿಂದ ಉರುಳಿ 410 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ, 931 ಮಂದಿ ಗಾಯಗೊಂಡಿದ್ದಾರೆ. ಮಧ್ಯ ರೈಲ್ವೇ ವಿಭಾಗದಲ್ಲಿ ಚಲಿಸುತ್ತಿರುವ ಲೋಕಲ್‌ ರೈಲುಗಳಿಂದ ಉರುಳಿ 259 ಮಂದಿ ಮೃತಪಟ್ಟರೆ, 504 ಮಂದಿ ಗಾಯಗೊಂಡಿದ್ದಾರೆ.

ರೈಲ್ವೇ ಪೊಲೀಸರ ವತಿಯಿಂದ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ,  ಮುಂಬಯಿ ಉಪನಗರ ರೈಲ್ವೇ ಜಾಲದಲ್ಲಿ ದೈನಂದಿನ ವಿವಿಧ ದುರ್ಘ‌ಟನೆಗಳಿಗೆ 22 ಮಂದಿ ಬಲಿಯಾಗುತ್ತಾರೆ. ಈ ರೀತಿಯ ದುರ್ಘ‌ಟನೆ ತಡೆಯು ವಲ್ಲಿ ರೈಲ್ವೇ ಆಡಳಿತವು ವಿಫಲ ಸಾಬೀತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next