Advertisement

 ಟಿಬೆಟಿಯನ್‌ ಗಡಿ ಪೊಲೀಸ್‌ಗೆ ಸೇರಿದ 38 ವೈದ್ಯರು

11:04 PM Oct 16, 2021 | Team Udayavani |

ಡೆಹ್ರಾಡೂನ್‌: ಕೋವಿಡ್‌ ಸಮಯದಲ್ಲಿ ಹಗಲಿರುಳು ದುಡಿದು ಸಾವಿರಾರು ಜೀವಗಳನ್ನು ಉಳಿಸಿದ್ದ 38 ವೈದ್ಯರನ್ನು ಇಂಡೋ ಟಿಬೆಟಿಯನ್‌ ಗಡಿ ಪೊಲೀಸ್‌(ಐಟಿಬಿಪಿ)ಗೆ ನೇಮಕ ಮಾಡಿಕೊಳ್ಳಲಾಗಿದೆ.

Advertisement

ಶನಿವಾರ ಉತ್ತರಾಖಂಡದ ಮಸ್ಸೂರಿಯಲ್ಲಿ ನಡೆದ ಪಾಸಿಂಗ್‌ ಔಟ್‌ ಪರೇಡ್‌ನ‌ಲ್ಲಿ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಈ ಎಲ್ಲ ವೈದ್ಯರು ತಮ್ಮ ತರಬೇತಿ ಅವಧಿ ಮುಗಿಯುವುದರೊಳಗೆ ನವದೆಹಲಿಯ ಸರ್ದಾರ್‌ ಪಟೇಲ್‌ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕೋವಿಡ್‌ ಕೆಲಸ ಆರಂಭಿಸಿದ್ದು, ಸುಮಾರು 13 ಸಾವಿರಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಅವರ ಶ್ರಮವನ್ನು ಗುರುತಿಸಿ, 24 ವಾರಗಳ ತರಬೇತಿ ನೀಡಿ, ಐಟಿಬಿಪಿಯಲ್ಲಿ ವೈದ್ಯಕೀಯ ಅಧಿಕಾರಿಗಳಾಗಿ ನೇಮಿಸಿಕೊಳ್ಳಲಾಗಿದೆ. ಅವರಲ್ಲಿ 14 ಮಂದಿ ಮಹಿಳಾ ವೈದ್ಯರಾಗಿದ್ದಾರೆ.

ಇದನ್ನೂ ಓದಿ:ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next