Advertisement

3,716 ಮರಗಳಿಗೆ ಕೊಡಲಿ ಪೆಟ್ಟು

04:36 PM Feb 09, 2019 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಆರು ಪಥದ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ 3,716 ಮರಗಳನ್ನು ಕತ್ತರಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌) ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಬಳ್ಳಾರಿ ರಸ್ತೆಯಲ್ಲಿ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ 144 ಮರಗಳ ಕಡಿಯುವ ಪ್ರಸ್ತಾವನೆ ಹೊರ ಬೀಳುವ ಮೊದಲೇ ಪರಿಸರವಾದಿಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಕೆಆರ್‌ಡಿಸಿಎಲ್‌ ಬರೋಬ್ಬರಿ 3,716 ಮರಗಳನ್ನು ಕತ್ತರಿಸಲು ಪ್ರಸ್ತಾವನೆ ಸಲ್ಲಿಸಿರುವುದು ವಿವಾದಕ್ಕೆ ಎಡೆಮಾಡಿಕೊಡಲಿದ್ದು, ಪರಿಸರವಾದಿಗಳ ಮತ್ತೆ ರಸ್ತೆಗಿಳಿಯುವ ಸಾಧ್ಯತೆಯಿದೆ.

ನಗರದ ಒಂದು ತುಂದಿ ಮತ್ತೂಂದು ತುದಿಗೆ ಸಂಚರಿಸುವ ವಾಹನಗಳಿಗೆ ಅನುಕೂಲವಾಗುವಂತೆ 102 ಕಿ.ಮೀ. ಉದ್ದದ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಅದರಂತೆ ಯೋಜನೆಗಾಗಿ 3,716 ಮರಗಳನ್ನು ಕತ್ತರಿಸಬೇಕಿದ್ದು, 601 ಮರಗಳನ್ನು ಭಾಗಶಃ ಕತ್ತರಿಸುವಂತೆ ಕೆಆರ್‌ಡಿಸಿಎಲ್‌ ಪಾಲಿಕೆಯ ಅರಣ್ಯ ವಿಭಾಗಕ್ಕೆ ಮನವಿ ಮಾಡಿದೆ.

ಯಾವುದೇ ಅಭಿವೃದ್ಧಿ ಯೋಜನೆಗೆ 50 ಮರಗಳಿಗಿಂತಲೂ ಹೆಚ್ಚಿನ ಮರಗಳನ್ನು ಕತ್ತರಿಸಬೇಕಾದರೆ ವೃಕ್ಷ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಪಡೆದ ನಂತರದಲ್ಲಿ ಮುಂದಿನ ಕ್ರಮಕೈಗೊಳ್ಳಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಎಲಿವೇಟೆಡ್‌ ಕಾರಿಡಾರ್‌ ಯೋಜನೆಗಾಗಿ 25 ಸಾವಿರ ಕೊಟಿ ರೂ. ವೆಚ್ಚವಾಗುವ ಕುರಿತು ಅಂದಾಜಿಸಲಾಗಿದ್ದು, ಯೋಜನೆಯಿಂದಾಗಿ ಹೆಚ್ಚಿನ ವಾಹನಗಳು ನಗರ ಪ್ರವೇಶಿಸದೆ ನಗರದ ಒಂದು ತುದಿಯಿಂದ ಮತ್ತೂಂದು ತುದಿಗೆ ಸಂಚಾರ ನಡೆಸಲಿವೆ. ಇದರಿಂದಾಗಿ ಸಮಯ ಉಳಿತಾಯವಾಗಲಿದೆ. ಆ ಹಿನ್ನೆಲೆಯಲ್ಲಿ 5 ಹಂತಗಳಲ್ಲಿ ಮರಗಳನ್ನು ಕತ್ತರಿಸುವಂತೆ ಕೆಆರ್‌ಡಿಸಿಎಲ್‌ ಪ್ರಸ್ತಾವನೆಯಲ್ಲಿ ತಿಳಿಸಿದೆ. 

Advertisement

ಆರು ಪಥದ ಎಲಿವೇಟೆಡ್‌ ಕಾರಿಡಾರ್‌ ವಿವರ 
– ಉತ್ತರ-ದಕ್ಷಿಣ ಕಾರಿಡಾರ್‌: ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಹೆಬ್ಟಾಳ
– ಪೂರ್ವ-ಪಶ್ಚಿಮ ಕಾರಿಡಾರ್‌ 1: ಕೆ.ಆರ್‌.ಪುರದಿಂದ ಗೊರಗುಂಟೆಪಾಳ್ಯ
– ಪೂರ್ವ-ಪಶ್ಚಿಮ ಕಾರಿಡಾರ್‌ 2: ವರ್ತೂರು ಕೋಡಿಯಿಂದ ಜ್ಞಾನಭಾರತಿ

4 ಪಥದ ಕನೆಕ್ಟಿಂಗ್‌ ಕಾರಿಡಾರ್‌ಗಳು
– ಅಗರದಿಂದ ಕಲಾಸಿಪಾಳ್ಯ
– ರಿಚ್‌ಮಂಡ್‌ ರಸ್ತೆಯಿಂದ ಹಲಸೂರು
– ಕಲ್ಯಾಣನಗರ ಜಂಕ್ಷನ್‌ನಿಂದ ವೀಲರ್ ರಸ್ತೆ ಜಂಕ್ಷನ್‌

Advertisement

Udayavani is now on Telegram. Click here to join our channel and stay updated with the latest news.

Next