Advertisement

370ನೇ ವಿಧಿ ರದ್ದು: ವಿಚಾರಣೆಗೆ ಸಂವಿಧಾನ ಪೀಠ ರಚನೆ

11:22 PM Sep 28, 2019 | mahesh |

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆಂದು ಸುಪ್ರೀಂ ಕೋರ್ಟ್‌ ಐವರು ನ್ಯಾಯ ಮೂರ್ತಿಗಳ ಸಂವಿಧಾನ ಪೀಠವನ್ನು ರಚಿಸಿದೆ.ನ್ಯಾ.ಎನ್‌.ವಿ.ರಮಣ ನೇತೃತ್ವದಲ್ಲಿ ಸಂವಿಧಾನ ಪೀಠವನ್ನು ರಚಿಸಲಾಗಿದ್ದು, ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್‌, ಆರ್‌.ಸುಭಾಷ್‌ ರೆಡ್ಡಿ, ಬಿ.ಆರ್‌.ಗವಾಯಿ ಮತ್ತು ಸೂರ್ಯಕಾಂತ್‌ ಇರಲಿದ್ದಾರೆ. 370ನೇ ವಿಧಿ ರದ್ದು ನಿರ್ಧಾರ ಹಾಗೂ ತದನಂತರದ ರಾಷ್ಟ್ರಪತಿಯವರ ಅಧ್ಯಾದೇಶದ ಸಾಂವಿಧಾನಿಕ ಮಾನ್ಯತೆಯನ್ನು ನ್ಯಾಯಪೀಠವು ಪರಿಶೀಲಿಸಲಿದ್ದು, ಅಕ್ಟೋಬರ್‌ 1ರಿಂದ ವಿಚಾರಣೆ ಆರಂಭವಾಗಲಿದೆ. ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠವು ಆಗಸ್ಟ್‌ 28ರಂದೇ ಈ ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸುವುದಾಗಿ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next