ನೈಜೀರಿಯಾ: ಈಶಾನ್ಯ ನೈಜೀರಿಯಾದ ಮೈದುಗುರಿ ನಗರದ ಹೊರಗೆ ಮೂರು ಬಸ್‌ಗಳು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 37 ಮಂದಿ ಪ್ರಯಾಣಿಕರು ಸಾವನ್ನಪ್ಪಿ ಹಲವರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ಸಂಭವಿಸಿದೆ.
ಮೈದುಗುರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಸ್ಸಿನ ಟಯರ್ ಸ್ಪೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡ ಬಸ್ಸು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೊಂದು ಬಸ್ಸಿಗೆ ನೇರವಾಗಿ ಢಿಕ್ಕಿ ಹೊಡೆದಿದೆ, ಈ ವೇಳೆ ಒಂದು ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ ಈ ಸಂದರ್ಭದಲ್ಲೇ ಈ ಮಾರ್ಗದಲ್ಲಿ ವೇಗವಾಗಿ ಬಂದ ಇನ್ನೊಂದು ಬಸ್ಸು ಈ ಎರಡು ಬಸ್ಸುಗಳಿಗೆ ಢಿಕ್ಕಿ ಹೊಡೆದಿದೆ ಪರಿಣಾಮ ಬೆಂಕಿ ಬಸ್ಸಿಗೆ ವ್ಯಾಪಿಸಿ ಸುಮಾರು ಮೂವತ್ತೇಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಬೊರ್ನೊ ರಾಜ್ಯದ ರಸ್ತೆ ಸುರಕ್ಷತಾ ಏಜೆನ್ಸಿಯ ಮುಖ್ಯಸ್ಥ ಉಟೆನ್ ಬೋಯಿ ಹೇಳಿದ್ದಾರೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅವಘಡಲ್ಲಿ ಮೃತಪಟ್ಟ ಮೃತರ ಗುರುತು ಪತ್ತೆ ಕೆಲಸ ಇನ್ನಷ್ಟೇ ನಡೆಯಬೇಕಿದೆ.
ಇಲ್ಲಿಯವರೆಗೆ, 37 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ಅವರಲ್ಲಿ ಹೆಚ್ಚಿನವರು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದಾರೆ” ಎಂದು ಬೋಯಿ ಹೇಳಿದರು.
Related Articles
ಇದನ್ನೂ ಓದಿ : ದೆಹಲಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ: ಮಾದಕ ವ್ಯಸನಿಯಿಂದ ಒಂದೇ ಕುಟುಂಬದ ನಾಲ್ವರ ಹತ್ಯೆ