Advertisement

 ಕೋವಿಡ್; ರಾಜ್ಯದಲ್ಲಿಂದು 7699 ಸೋಂಕಿತರು ಗುಣಮುಖ, 3604 ಹೊಸ ಪ್ರಕರಣ ಪತ್ತೆ

07:16 PM Jun 27, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿಂದು (ಜೂನ್ 27) ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ನೂರಕ್ಕಿಂತ ಕಡಿಮೆ ದಾಖಲಾಗಿದೆ. ಹಾಗೂ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ.

Advertisement

ಇಂದು ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ  ಕಳೆದ 24 ಗಂಟೆಗಳ ಅವಧಿ ( ದಿನಾಂಕ: 26:06:2021, 00:00 ರಿಂದ 23:59 ರವರೆಗೆ)ಯಲ್ಲಿ 3604 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಹಾಗೂ ಸೋಂಕಿನಿಂದ 89 ಜನರು ಸಾವನ್ನಪ್ಪಿದ್ದಾರೆ. ಇನ್ನು 7699 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-7, ಬಳ್ಳಾರಿ-26, ಬೆಳಗಾವಿ-143, ಬೆಂಗಳೂರು ಗ್ರಾಮೀಣ-77, ಬೆಂಗಳೂರು ನಗರ-788, ಬೀದರ್-8, ಚಾಮರಾಜನಗರ-54, ಚಿಕ್ಕಬಳ್ಳಾಪುರ-40, ಚಿಕ್ಕಮಗಳೂರು-126, ಚಿತ್ರದುರ್ಗ-22, ದಕ್ಷಿಣ ಕನ್ನಡ-454, ದಾವಣಗೆರೆ-118, ಧಾರವಾಡ-46, ಗದಗ-18, ಹಾಸನ-322, ಹಾವೇರಿ-13, ಕಲಬುರಗಿ-36, ಕೊಡಗು-115, ಕೋಲಾರ-101, ಕೊಪ್ಪಳ-9, ಮಂಡ್ಯ-109, ಮೈಸೂರು-478, ರಾಯಚೂರು-19, ರಾಮನಗರ-15, ಶಿವಮೊಗ್ಗ-177, ತುಮಕೂರು-116, ಉಡುಪಿ-97, ಉತ್ತರ ಕನ್ನಡ-57, ವಿಜಯಪುರ-9, ಯಾದಗಿರಿ-4.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next