Advertisement
ಯೋಜನೆಗೆ ರೈತರಿಂದ ಭಾರೀ ಪ್ರತಿಕ್ರಿಯೆ: ಈಗಾಗಲೇ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ ರೈತರನ್ನು ಆಕರ್ಷಿಸಿದೆ. ಆನ್‌ಲೈನ್ ಮುಖಾಂತರ ಸಾಕಷ್ಟು ಅರ್ಜಿಗಳು ಬರುತ್ತಿವೆ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಸದಸ್ಯರು ಬೆಳೆ ವಿಮೆ ಸಂಬಂಧಿಸಿದಂತೆ ಪ್ರತಿ ರೈತರಿಗೆ ಅರಿವು ಮೂಡಿಸಬೇಕು ಬೆಳೆ ವಿಮೆ ಮಾಡಿಸಿದರೆ ರೈತರು, ಬೆಳೆ ನಷ್ಟವಾದರೆ ವಿಮೆ ಹಣ ಬರುವುದು. ಜಿಲ್ಲೆಯಲ್ಲಿ 3108 ರೈತರು ವಿಮೆ ಮಾಡಿಸಿದ್ದು, ಅದರಲ್ಲಿ 2 ಕೋಟಿ 45 ಲಕ್ಷ ಅನುದಾನ ಬರಲಿದೆ. ಕೃಷಿ ಇಲಾಖೆಯಲ್ಲಿ ಶೇ.75%ರಷ್ಟು ಸಿಬ್ಬಂದಿ ಕೊರತೆ ಇದ್ದರೂ, ಕೃಷಿ ಸಹಾಯಕ ನಿರ್ದೇಶಕರು ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
Related Articles
Advertisement
ಅನುದಾನ ಅಗತ್ಯವಿದೆ: ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್ ಮಾತನಾಡಿ, ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ರೈತರಿಗೆ ಸಕಾಲದಲ್ಲಿ ಬಿತ್ತನೆಯ ಬೀಜ ದೊರೆಯಬೇಕು. ಜಿಲ್ಲಾ ಕೃಷಿಕ ಸಮಾಜದ ಕಟ್ಟಡ ನಿರ್ಮಾಣ ಕಾಮಗಾರಿ ಕೊನೆ ಹಂತದಲ್ಲಿದೆ. ಇನ್ನೂ ಅನುದಾನ ಬೇಕಾಗಿದ್ದು, ಕೃಷಿ ಇಲಾಖೆಯಿಂದ ಅನುದಾನ ಒದಗಿಸಿಕೊಡಬೇಕು. ಕೃಷಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಇನ್ನು 35 ಲಕ್ಷ ಅನುದಾನ ಬೇಕಾಗಿದ್ದು ಗುತ್ತಿಗೆ ದಾರರಿಗೆ ಹಣವನ್ನು ನೀಡಿದರೆ ಕಾಮಗಾರಿ ಪೂರ್ಣ ವಾಗುವುದು. ಪ್ರತಿ 3 ತಿಂಗಳಿಗೊಮ್ಮೆ ಸಭೆ ಆದರೆ ಅನುಕೂಲ ವಾಗುವುದು ಎಂದರು.
ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್ ಮಾತನಾಡಿ, ತೋಟಗಾರಿಕೆ ಇಲಾಖೆ ಯ ಬೆಳೆಗಳ ರೋಗ ಮತ್ತು ಕೀಟಗಳ ನಿಯಂತ್ರಣಕ್ಕಾಗಿ ಸಾಮಾನ್ಯ ವರ್ಗ ರೈತರಿಗೆ ಶೇ.75 ಹಾಗೂ ಎಸ್‌ಸಿ, ಎಸ್‌ಟಿ ಶೇ.90 ಸಸ್ಯ ಸಂರಕ್ಷಣೆ ಔಷಧಿ ಖರೀದಿಸಿದ ರೈತರಿಗೆ ಸಹಾಯ ಧನ ನೀಡಲಾಗುವುದು. ಪಾಲಿ ಹೌಸ್, ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಬಿ.ನಾಗರಾಜ್, ಖಜಾಂಚಿ ಹೊನ್ನಸಿದ್ದಯ್ಯ, ರಾಜ್ಯ ಪ್ರತಿನಿಧಿ ಕೃಷ್ಣಪ್ಪ, ಜಿಲ್ಲಾ ಪ್ರತಿನಿಧಿ ಹಿಂಡಿಗನಾಳ ಎಚ್.ಕೆ. ನಾರಾಯಣ ಗೌಡ, ದೇವನಹಳ್ಳಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಗೌಡ, ಜಿಲ್ಲಾ ರೇಷ್ಮೇ ಇಲಾಖೆ ಉಪ ನಿರ್ದೇಶಕ ಭೈರಾರೆಡ್ಡಿ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಮಂಜುಳಾ, ನೆಲಮಂಗಲ ಕೃಷಿ ಸಹಾಯಕ ನಿರ್ದೇಶಕಿ ಸುಶೀಲಮ್ಮ, ಹೊಸಕೋಟೆ ಕೃಷಿ ಸಹಾಯಕ ನಿರ್ದೇಶಕ ನಾಗರಾಜ್, ಬೂದಿಗೆರೆ ವಿಎಸ್‌ಎಸ್‌ಎನ್ ಅಧ್ಯಕ್ಷ ಶಂಕರಪ್ಪ, ಬೆ„ಚಾಪುರ ಎಮ್ ಪಿಸಿಎಸ್ ನಿರ್ದೇಶಕ ಪುರುಷೋತಮ್ ಕುಮಾರ್, ಗ್ರಾಪಂ ಸದಸ್ಯ ಗೋಪಾಲಗೌಡ ಇದ್ದರು. ರವಿಕುಮಾರ್ , ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಗಿರೀಶ್ ವೀಕ್ಷಿಸುತ್ತಿರುವುದು.