Advertisement

ವಿಶ್ವದ ಅತೀ ಉದ್ದದ 36,000 ಕೋಟಿ ರೂ ಗಂಗಾ ಎಕ್ಸ್‌ಪ್ರೆಸ್‌ ವೇ ಯೋಜನೆ

10:13 AM Jan 29, 2019 | Team Udayavani |

ಪ್ರಯಾಗ್‌ರಾಜ್‌, ಉತ್ತರ ಪ್ರದೇಶ : ಪ್ರಯಾಗ್‌ರಾಜ್‌ ಅನ್ನು ಮೀರತ್‌ ಜತೆ ಜೋಡಿಸುವ ವಿಶ್ವದ ಅತೀ ಉದ್ದದ 600 ಕಿ.ಮೀ. ಗಂಗಾ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಯೋಜನೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಂದು ಇಲ್ಲಿ  ಕುಂಭಮೇಳದ ಸಂದರ್ಭದಲ್ಲಿ ನಡಸಿರುವ ಪ್ರಪ್ರಥಮ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಿದರು. 

Advertisement

ಸಂಪುಟ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಆದಿತ್ಯನಾಥ್‌, ವಿಶ್ವದ ಅತೀ ಉದ್ದದ 600 ಕಿ.ಮೀ. ನ ಪ್ರಸ್ತಾವಿತ ಗಂಗಾ ಎಕ್ಸ್‌ಪ್ರೆಸ್‌ ವೇ ಯೋಜನೆ ಪ್ರಯಾಗ್‌ರಾಜ್‌ ಅನ್ನು ಪಶ್ಚಿಮ ಉತ್ತರ ಪ್ರದೇಶದೊಂದಿಗೆ ಜೋಡಿಸುತ್ತದೆ ಎಂದು ಹೇಳಿದರು. 

ಮಹತ್ವಾಕಾಂಕ್ಷೆಯ ಪ್ರಸ್ತಾವಿತ ಗಂಗಾ ಎಕ್ಸ್‌ಪ್ರೆಸ್‌ ವೇ ಯನ್ನು 6,550 ಹೆಕ್ಟೇರ್‌ ಪ್ರದೇಶದಲ್ಲಿ ನಿರ್ಮಿಸಲಾಗುವುದು; ಇದರ ಅಂದಾಜು ವೆಚ್ಚ 36,000 ಕೋಟಿ ರೂ. ಇರುವುದು. ಆರಂಭದಲ್ಲಿ ಇದನ್ನು ಚತುಷ್ಪಥವಾಗಿ ನಿರ್ಮಿಸಲಾಗುವುದು ಮತ್ತು ಅನಂತರ ಅದನ್ನು ಷಟ್‌ಪಥಕ್ಕೆ ವಿಸ್ತರಿಸಲಾಗುವುದು ಎಂದು ಸಿಎಂ ಆದಿತ್ಯನಾಥ್‌ ಹೇಳಿದರು. 

ಗಂಗಾ ಎಕ್ಸ್‌ಪ್ರೆಸ್‌ ವೇ ಹಾದು ಹೋಗುವ ಸ್ಥಳಗಳೆಂದರೆ ಮೀರತ್‌, ಆಮ್‌ರೋಹಾ, ಬುಲಂದ್‌ಶಹರ್‌, ಬುಡಾವೂ, ಶಹಜಹಾನ್‌ಪುರ, ಕನೋಜ್‌, ಉನ್ನಾವೋ, ರಾಯ್‌ಬರೇಲಿ, ಪ್ರತಾಪ್‌ಗ್ಢ. ಅಂತಿಮವಾಗಿ ಇದು ಪ್ರಯಾಗ್‌ರಾಜ್‌ ತಲುಪುವುದು ಎಂದು ಸಿಎಂ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next