Advertisement

ಸಕ್ರಿಯ ಸೋಂಕಿತರು 355, ಬೆಡ್‌ ಮೀಸಲು 37

03:22 PM May 03, 2021 | Team Udayavani |

ಬಂಗಾರಪೇಟೆ: ತಾಲೂಕು ಕೇಂದ್ರದಲ್ಲಿ ಸಿಟಿ ಸ್ಕ್ಯಾನ್‌ಸೆಂಟರ್‌ ಸೇರಿದಂತೆ ಕೊರೊನಾ ಪಾಸಿಟಿವಿಟಿನಿಖರವಾಗಿ ಹೇಳಬಲ್ಲ ಸೂಕ್ತ ಲ್ಯಾಬ್‌ಗಳಿಲ್ಲ.ಇದರಿಂದ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗದೇಹಲವು ಮಂದಿ ಕೋವಿಡ್‌ಗೆ ಬಲಿಯಾಗುತ್ತಿದ್ದಾರೆಎಂಬ ಮಾತು ತಾಲೂಕಿನಲ್ಲಿ ಕೇಳಿ ಬರುತ್ತಿವೆ.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಬಾರಿಯೂಕೋವಿಡ್‌ ಕೇರ್‌ ಸೆಂಟರ್‌ ಆರಂಭ ಮಾಡದೇ,ಜಿಲ್ಲಾಸ್ಪತ್ರೆಗೆ ಕೊರೊನಾ ಸೋಂಕಿತರನ್ನು ರವಾನೆಮಾಡಲಾಗುತ್ತಿತ್ತು. ಈಗ ಸೋಂಕಿತರ ಚಿಕಿತ್ಸೆಗೆ 37ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 20 ಆಕ್ಸಿಜನ್‌ಸಿಲಿಂಡರ್‌ ಇದ್ದು, ಎರಡು ದಿನಗಳ ಹಿಂದೆ ಡೀಸಿಹೊಸದಾಗಿ 10 ಸಿಲಿಂಡರ್‌ ಮಂಜೂರು ಮಾಡಿದ್ದಾರೆ.

ಆದರೆ, ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಯಲ್ಲಿ 100ಬೆಡ್‌ಗಳಿವೆ ಎಂಬ ಹೇಳಿಕೆ ನೀಡುತ್ತಿದ್ದಾರೆ.ತಾಲೂಕಿನಲ್ಲಿ 355 ಸಕ್ರಿಯ ಸೋಂಕಿತರು ಇದ್ದಾರೆ.ಇದರಲ್ಲಿ 37 ಮಂದಿಗೆ ಬೆಡ್‌ ಕಲ್ಪಿಸಿದರೆ, ಉಳಿದವರುಎಲ್ಲಿದ್ದಾರೆ, ಅವರ ಗತಿಯೇನು ಎನ್ನುವುದರ ಬಗ್ಗೆಯಾರೂ ಮಾಹಿತಿ ಕೊಡುವವರೇ ಇಲ್ಲವಾಗಿದೆ.

ಪ್ರತಿದಿನ ಸರ್ಕಾರಿ ಆಸ್ಪತ್ರೆಯಲ್ಲಿ 3 ರಿಂದ ಐವರುಸಾವನ್ನಪ್ಪುತ್ತಿದ್ದಾರೆ ಎನ್ನಲಾಗಿದೆ.30 ಮಂದಿ ಸಾವು: ಜಿಲ್ಲಾ ಆರೋಗ್ಯಾಧಿಕಾರಿಗಳು ಬಿಡುಗಡೆ ಮಾಡುವ ಹೆಲ್ತ್‌ ಬುಲಿಟಿನ್‌ನಲ್ಲಿ ತಾಲೂಕಿನಲ್ಲಿಇದುವರೆಗೂ 30 ಮಂದಿ ಕೋವಿಡ್‌ಗೆ ಮೃತಪಟ್ಟಿದ್ದಾರೆಎಂದು ತೋರಿಸಲಾಗಿದೆ.  ಬೆಡ್‌, ಆಕ್ಸಿಜನ್‌, ಸೂಕ್ತ ಚಿಕಿತ್ಸೆಸಿಗದೇ ಮನೆಯಲ್ಲಿ, ಇತರೆ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 30ಕ್ಕೂ ಹೆಚ್ಚು ಎನ್ನಲಾಗುತ್ತಿದೆ.

ವರದಿ ಬರಲು ಮೂರು ದಿನ: ತಾಲೂಕಿನಲ್ಲಿ 355ಸಕ್ರಿಯ ಸೋಂಕಿತರಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆಗೆಹೋಗುವ ರೋಗಿಗಳಿಗೆ ಮೊದಲಿಗೆ ಕೊರೊನಾ ಪರೀಕ್ಷೆಮಾಡಿಸಿಕೊಂಡು ಬನ್ನಿ ಎಂದು ಹೇಳಲಾಗುತ್ತಿದೆ.ಕೊರೊನಾ ಪರೀಕ್ಷೆ ವರದಿ ಬರಲು ಮೂರು ದಿನಬೇಕಾಗುತ್ತದೆ.

Advertisement

ಅಲ್ಲದೆ, ಕೊರೊನಾ 2ನೇ ಅಲೆತೀವ್ರವಾಗಿರುವ ಕಾರಣ, ಮೂರು ದಿನದವರೆಗೂಚಿಕಿತ್ಸೆ ಸಿಗದೇ ಸೋಂಕಿತರು ವಿಧಿ ಇಲ್ಲದೇಸಾವನ್ನಪ್ಪುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸಿಟಿ ಸ್ಕ್ಯಾನ್‌ ವ್ಯವಸ್ಥೆ ಮಾಡಿ: ಸರ್ಕಾರಿ ಆಸ್ಪತ್ರೆಯಲ್ಲಿರ್ಯಾಪಿಡ್‌ ಪರೀಕ್ಷೆ ಮಾಡಿಸಿದರೆ ಕೊರೊನಾ ಪಾಸಿಟಿವ್‌ಎಂದು ತೋರಿಸುತ್ತಿದೆ.  ಬೇರೆ ಕಡೆ ಸಿಟಿ ಸ್ಕ್ಯಾನ್‌ಮಾಡಿಸಿದರೆ ನೆಗೆಟಿವ್‌ ಬರುತ್ತಿದೆ. ಇದರಿಂದವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಸಿಟಿಸ್ಕ್ಯಾನ್‌ ಬೇಕಾಗಿದ್ದಲ್ಲಿ ಕೋಲಾರದ ಖಾಸಗಿ ಲ್ಯಾಬ್‌ಗಳಿಗೆ ಹೋಗಬೇಕಾಗಿದೆ. ಈ ವೇಳೆಗೆ ಕೆಲಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುತ್ತಾರೆ.

ಹೀಗಾಗಿ, ಕೂಡಲೇ ಆಸ್ಪತ್ರೆಗೆ ಸಿಟಿ ಸ್ಕ್ಯಾನ್‌ ವ್ಯವಸ್ಥೆಮಾಡಬೇಕು ಎಂಬುದು ಸ್ಥಳೀಯರ ಮನವಿ ಆಗಿದೆ.ಸರ್ಕಾರಿ ಆಸ್ಪತ್ರೆಯಲ್ಲಿರುವ 37 ಬೆಡ್‌ಗಳಲ್ಲಿ ಚಿಕಿತ್ಸೆಪಡೆಯುವ ಸೋಂಕಿತರು ಸñರೆ ‌¤ ಮಾತ್ರ ಲೆಕ್ಕಕ್ಕೆ ತೆಗೆದುಕೊÙಲಾಗ ‌Û ‌ುತ್ತಿದೆ. ಬೇರೆ ಕಡೆ ಸಾವನ್ನಪ್ಪಿದರೆ ಲೆಕ್ಕಕೆ Rತೆಗೆದುಕೊಳ್ಳುತ್ತಿಲ್ಲ. ಸದ್ಯ 28 ಸಾವು ಎಂದು ನೋಂದಣಿಆಗಿದೆ. ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಿ 19 ಅಧಿಕಾರಿ,ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಇರುವ 37ಬೆಡ್‌ಗಳಲ್ಲಿನ ಸೋಂಕಿತರನ್ನು ಸಮರ್ಪಕವಾಗಿ ನೋಡಿಕೊಳ್ಳಲಾಗುತ್ತಿಯೇ ಎಂಬ ಅನುಮಾನ ಜನರಲ್ಲಿ ಇದೆ.

 

ಎಂ.ಸಿ.ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next